ನಿಯತಿ ಪೌಂಡೇಶನ್ ದಿಂದ ಇಂಜನೀಯರಿಂಗ್ ವಿದ್ಯಾರ್ಥಿಗೆ ಧನ ಸಹಾಯ

ಒಟ್ಟು ವೀಕ್ಷಣೆಗಳು : 46
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಬಡತನದಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಲಾಗದ ಎಂಜಿನಿಯರಿಂಗ್‌ ಕೋರ್ಸ್‌ ಮುಂದುವರಿಸುವುದಕ್ಕೆ ಕೆ.ಎಲ್.ಇ ಇಂಜನೀಯರಿಂಗ್ ಕಾಲೇಜಿನ ಮೇಘರಾಜ ಉಚಾಗಾಂವಕರ ಎಂಬ ವಿದ್ಯಾರ್ಥಿಗೆ ನಿಯತಿ ಪೌಂಡೇಶನ್ ನೆರವಿನ ಹಸ್ತ ಚಾಚಿದೆ. ವಿದ್ಯಾರ್ಥಿಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು ಈ ಸಂಬಂಧ ಪಿ.ಎಸ್.ಘಾಡಿ ಎಂಬುವರು ನಿಯತಿ ಪೌಂಡೇಶನ್ ಅಧ್ಯಕ್ಷೆ ಸೋನಾಲಿ ಸರ್ನೋಬತ ಗಮನಕ್ಕೆ ತಂದಿದ್ದರು. ಡಾ.ಸೋನಾಲಿ ಸರ್ನೋಬತ ವಿದ್ಯಾರ್ಥಿಗೆ ಶಿಕ್ಷಣ ಮುಂದುವರಿಸಲು ಇಂದು ಹತ್ತು ಸಾವಿರ ರೂಪಾಯಿಗಳ ಚೆಕ್ ನ್ನು ವಿದ್ಯಾರ್ಥಿಗೆ ವಿತರಿಸಿದರು. ಯಾರಾದರೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲು ಇಚ್ಛಿಸುವವರು ಡಾ. ಸೋನಾಲಿ ಸರ್ನೋಬತರನ್ನು ಸಂಪರ್ಕಿಸಿ ಎಂದು ವಿನಂತಿಸಿಕೊಡಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು