ದಿ. 28 ಶನಿವಾರದಿಂದ ದಿ. 30 ರ ವರೆಗೆ ರಂಗ ಸಂಪದದ “ನಾಡಹಬ್ಬ ನಾಟಕೋತ್ಸವ”

ಒಟ್ಟು ವೀಕ್ಷಣೆಗಳು : 75
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ನಗರದ ರಂಗಸಂಪದದವರು ಇದೆ. ದಿ. 28 ಶನಿವಾರದಿಂದ ದಿ. 30 ಸೋಮಾರದ ವರೆಗೆ ಮೂರು ದಿನಗಳ ಕಾಲ “ನಾಡಹಬ್ಬ ನಾಟಕೋತ್ಸವ” ಹಮ್ಮಿಕೊಂಡಿದ್ದು ಈ ಕುರಿತಂತೆ  ಇಂದು ಬೆಳಿಗ್ಗೆ 10-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿ ರಂಗಸಂಪದವು ತನ್ನದೇ ಆದ ತಂಡವನ್ನು ಕಟ್ಟಿಕೊಂಡು  ಕಳೆದ ನಾಲ್ಕು ದಶಕಗಳಿಂದ  ಬೆಳಗಾವಿ, ಬೈಸೂರು, ಬೆಂಗಳೂರು, ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ತನ್ನದೆ  ಕಲಾವಿದರಿಂದ ಕನ್ನಡ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಯಶಸ್ವಿಯಾಗಿ  ಕಾರ್ಯ ನಿರ್ವಸುತ್ತ ಬಂದಿದೆ. ಅಲ್ಲದೇ ಕಲೆ ಸಂಗೀತ  ಸಂಸ್ಕøತಿ ನಾಟಕ ಹೀಗೆ  ಎಲ್ಲ ರಂಗದಲ್ಲಿಯೂ ಭಾಗವಹಿಸುತ್ತ  ತನದೇ ಆದ ವಿಶೇಷ ಕೊಡುಗೆಯನ್ನು ನೀಡಿರುವುದು ತಮಗೆ ಗೊತ್ತಿದ್ದ ವಿಷಯವಾಗಿದೆ. ಈಗ ದಿ. 28 ಶನಿವಾರದಿಂದ ದಿ.30 ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6-30 ಕ್ಕೆ ಸರಿಯಾಗಿ ಕೋನವಾಳಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆಯ ರೀಝ ಟಾಕೀಜ್) ದಲ್ಲಿ “ನಾಡಹಬ್ಬ ನಾಟಕೋತ್ಸವ” ವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿ  ಮೂರುದಿನಗಳ ನಾಟಕಗಳ ಕುರಿತು ವಿವರಣೆ ನೀಡಿದರು.
ದಿ. 28 ಶನಿವಾರದಂದು ರಂಗಸಂಪದ ಕಲಾವಿದರಿಂದ “ನಾ ಸತ್ತಿಲ್ಲ”ನಾಟಕ. 75 ನಿಮಿಷಗಳ ನಾಟಕ ಇದಾಗಿದ್ದು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ರಚಿಸಿದ್ದಾರೆ. ಶರಣಗೌಡ ಪಾಟೀಲ ಅವರ ನಿರ್ದೇಶನವಿದೆ. ದಿ. 29 ರವಿವಾರದಂದು ಸವದತ್ತಿಯ ರಂಗ ಆರಾಧನಾ ಸಂಸ್ಕøತಿಕ ಸಂಘಟನೆಯವರಿಂದ “ಜಾಳಪೋಳ” ನಾಟಕ ಪ್ರದರ್ಶನವಿದೆ. 90 ನಿಮಿಷಗಳ ಅವಧಿಯ  ಈ ನಾಟಕವನ್ನು ವಾಮನ ಕುಲಕರ್ಣಿ ರಚಿಸಿದ್ದು ಝಕೀರ ನದಾಫ ನಿರ್ದೇಶನವಿದೆ. ದಿ. 30 ಸೋಮವಾರದಂದು ಧಾರವಾಡದ ಟೂರಿಂಗ್ ಟಾಕೀಜ್‍ದವರಿಂದ  ‘ಹುಚ್ಚರ ಸಂತೆ’ ನಾಟವಿದೆ. 90 ನಿಮಿಷಗಳ  ಈ ನಾಟಕ ರಚನೆ ಮತ್ತು ನಿರ್ದೇಶನ ಉಮೇಶ ತೇಲಿಯವರದ್ದು.
ರಂಗ ಸಂಪದ ಪ್ರೇಕ್ಷಕ ಸದಸ್ಯತ್ವ ಪಡೆದಿರುವವರಿಗೆ ನಾಟಕ ಪ್ರವೇಶ ಉಚಿತವಿದೆ. ಬೇರೆಯವರು ಪ್ರತಿ ನಾಟಕಕ್ಕೆ ಪ್ರತಿಯೊಬ್ಬರಿಗೆ ರೂ. 100 ಸಾಹಾಯ ಪ್ರವೇಶಧನವಿದೆ. ಕೊಟ್ಟ ಸಮಯಕ್ಕೆ ಸರಿಯಾಗಿ ನಾಟಕಗಳು ಪ್ರಾರಂಭವಾಗುತ್ತಿದ್ದು ಪ್ರೇಕ್ಷಕರು 15 ನಿಮಿಷ ಮೊದಲೆ ಆಸೀನರಾಗಿಬೇಕೆಂದು ಹೇಳಿದರು. ಡಾ. ಕುಲಕರ್ಣಿ ಪತ್ರಿಕೆಗಳಲ್ಲಿ ನಾಟಕಗಳ ವಿಮರ್ಶಾ ಲೇಖನಗಳ ಕೊರತೆ ಎದ್ದು ಕಾಣುತ್ತಿದ್ದು  ಎಲ್ಲ ಮಾಧ್ಯಮ ಮಿತ್ರರು ಎಲ್ಲ ನಾಟಕಗಳಿಗೆ ಬಂದು ವಿಮರ್ಶಾ ಲೇಖನಗಳನ್ನು ಬರೆಯುವ ಮೂಲಕ ನಮ್ಮ ತಪ್ಪು ಒಪ್ಪುಗಳನ್ನು ತಿಳಿಸಬೇಕೆಂದು  ಕೇಳಿಕೊಂಡರು. ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸ್ಥೆಯ ಖಜಾಂಚಿ ಆರ್. ಬಿ. ಕಟ್ಟಿಯವರು ಮೊದಲಿನಂತೆ ದೊಡ್ಡ ನಾಟಕಗಳು ಇರುವುದಿಲ್ಲ. ಇಂದಿನ ಯಾಂತ್ರಿಕ ಬದುಕಿನ ಸಮಯಾಭಾವ ಅರಿತುಕೊಂಡು ನಾಟಕದ ಸಮಯದ ಮಿತಿಯನ್ನು ಹಾಕಿಕೊಂಡಿದ್ದೇವೆ. ಗರಿಷ್ಠ  ಎರಡು ಗಂಟೆಗಳ ನಾಟಕಗಳಿರುತ್ತವೆ ಎಂದು ಹೇಳಿದರು. ಪ್ರಹ್ಲಾದ ರಾಜಪುರೋಹಿತ, ದಿಲೀಪ ಮಾಳಗಿ, ರಮೇಶ ಅನಿಗಳ, ಗುರುನಾಥ ಕುಲಕರ್ಣಿ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು