ಬಸವರಾಜ ಕಟ್ಟೀಮನಿ ಜನ್ಮಶತಮಾನೋತ್ಸವ, ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಒಟ್ಟು ವೀಕ್ಷಣೆಗಳು : 25
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮೂಡಲಗಿ: ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ವಿಭಾಗ ಮತ್ತು ಕಟ್ಟಿಮನಿ ಪ್ರತಿಷ್ಟಾನ ಆಶ್ರಯದಲ್ಲಿ  ‘ಬಸವರಾಜ ಕಟ್ಟಿಮನಿ ಶತಮಾನೂತ್ಸವ 2019’ ಕಾರ್ಯಕ್ರಮವು ಬೆಳ್ಳಿಗೆ 10 ಗಂಟಗೆ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ ಅವರಿಂದ ಉದ್ಘಾಟನೆಯಾಗಲಿದೆ. ಸಾಹಿತಿ, ಚಿಂತಕ ಡಾ. ಬಸವರಾಜ ಸಾದರ ‘ಕಟ್ಟೀಮನಿ ಬದುಕು-ಬರಹ: ಒಂದು ಸಮಗ್ರ ನೋಟ’ ಕುರಿತು ವಿಶೇಷ ಉಪನ್ಯಾಸ ನೀಡುವರು. ಪ್ರೊ. ಚಂದ್ರಶೇಖರ ಅಕ್ಕಿ,  ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಅತಿಥಿಯಾಗಿ ಭಾಗವಹಿಸುವರು.
ಗೋಷ್ಠಿ-1: ಬೆಳಿಗ್ಗೆ 11.30ಕ್ಕೆ ಕಟ್ಟೀಮನಿ ಕಾದಂಬರಿಗಳ ಒಳನೋಟ ಗೋಷ್ಠಿಯಲ್ಲಿ ಹೆಣ್ಣು ಮತ್ತು ಮಣ್ಣು ಕಾದಂಬರಿ ಕುರಿತು ಡಾ. ವೈ.ಎಂ. ಯಾಕೊಳ್ಳಿ, ಜರತಾರಿ ಜಗದ್ಗುರು ಕುರಿತು ಮಾರುತಿ ದಾಸನ್ನವರ ಮಾತನಾಡುವರು. ಡಾ. ಮಹಾದೇವ ಜಿಡ್ಡಿಮನಿ ಪ್ರತಿಸ್ಪಂದಿಸುವರು. 
ಗೋಷ್ಠಿ-2: ಮಧ್ಯಾಹ್ನ 1.30ಕ್ಕೆ ಜರುಗುವ 2ನೇ ಗೋಷ್ಠಿಯಲ್ಲಿ ಕಟ್ಟೀಮನಿ ಕಥೆಗಳ ವೈವಿದ್ಯತೆ ಕುರಿತು ಬಸವಣ್ಣೆಪ್ಪ ಕಂಬಾರ, ಪತ್ರಕರ್ತ ಕಟ್ಟೀಮನಿ ಕುರಿತು ಮಹಾಲಿಂಗ ಮಂಗಿ ಮಾತನಾಡುವರು. ಪ್ರೊ. ಸಂಗಮೇಶ ಗುಜಗೊಂಡ ಪ್ರತಿಸ್ಪಂದಿಸುವರು. 
ಸಮಾರೋಪ : ಸೆ. 26ರಂದು ಮಧ್ಯಾಹ್ನ 3.30ಕ್ಕೆ ಸಂಸ್ಥೆ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗುವುದು. ವಿಮರ್ಶಕ ಡಾ. ದುರ್ಗಾದಾಸ ಸಮಾರೋಪ ನುಡಿಗಳನ್ನಾಡುವರು ಎಂದು ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಪ್ರೊ. ಚಂದ್ರಶೇಖರ ಅಕ್ಕಿ ತಿಳಿಸಿರುವರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು