ಎನ್‍ಎಸ್‍ಎಸ್ ದಿನಾಚರಣೆ ಆಚರಣೆ, ಎನ್‍ಎಸ್‍ಎಸ್‍ವು ನಾಯಕತ್ವ ಗುಣ ಬೆಳೆಸುತ್ತದ: ಪ್ರೊ.ಎಸ್.ಜಿ. ನಾಯ್ಕ್

ಒಟ್ಟು ವೀಕ್ಷಣೆಗಳು : 26
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮೂಡಲಗಿ : ‘ಎನ್‍ಎಸ್‍ಎಸ್‍ವು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಸಾಮಾಜಿಕ ಸೇವಾಮನೋಭಾವನೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ’ ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ. ಎಸ್.ಜಿ. ನಾಯ್ಕ್ ಹೇಳಿದರು. ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದಲ್ಲಿ ಮಂಗಳವಾರ ಆಚರಿಸಿದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಎನ್‍ಎಸ್‍ಎಸ್‍ವು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು. ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮಾತನಾಡಿ ‘ವಿದ್ಯಾರ್ಥಿಗಳು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸೌಹಾರ್ದತೆ, ಸಹಬಾಳ್ವೆ ಮತ್ತು ರಾಷ್ಟ್ರಪ್ರೇಮ ಬೆಳೆಯುತ್ತದೆ ಎಂದರು. ಪ್ರೊ. ಎಸ್.ಎ. ಶಾಸ್ತ್ರೀಮಠ ಮತ್ತು ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೊ. ಎಸ್.ಸಿ. ಮಂಟೂರ ಪ್ರಾಸ್ತಾವಿಕ ಮಾತನಾಡಿದರು.ನ್ಯಾಕ್ ಸಂಯೋಜಕ ಡಾ. ವಿ.ಆರ್. ದೇವರಡ್ಡಿ, ಪ್ರೊ. ಜಿ. ಸಿದ್ರಾಮ್‍ರಡ್ಡಿ ವೇದಿಕೆಯಲ್ಲಿದ್ದರು. ಸೌಮ್ಯ ಅವಟಿ ಮತ್ತು ಸಂಗಡಿಗರು ಎನ್‍ಎಸ್‍ಎಸ್ ಗೀತೆಯನ್ನು ಹಾಡಿದರು. ನಿರ್ಮಲಾ ಪಾಟೀಲ, ಐಶ್ವರ್ಯ ಮುಂಜಿ ನಿರೂಪಿಸಿದರು, ನಾಗರಾಜ ಕುಲಿಗೋಡ ವಂದಿಸಿದರು. ಎನ್‍ಎಸ್‍ಎಸ್ ದಿನಾಚರಣೆ ಅಂಗವಾಗಿ ಕಾಲೇಜು ರಸ್ತೆಯಲ್ಲಿ ಹರಿಯುವ ಕೊಳಚೆ ನೀರನ್ನು ಚರಂಡಿಗೆ ಸಾಗಿಸಿದರು ಮತ್ತು ರಸ್ತೆ ಸ್ವಚ್ಛತೆ ಮಾಡಿದರು.


ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು