ಬಸವರಾಜ ಕಟ್ಟೀಮನಿ ಜನ್ಮಶತಮಾನೋತ್ಸವ

ಒಟ್ಟು ವೀಕ್ಷಣೆಗಳು : 105
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ತಮ್ಮ 14ನೇ ವಯಸ್ಸಿನಲ್ಲಿ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಸ್ವಾರ್ಥಕತೆಯ ಬಧುಕು ಪ್ರಾರಂಬಿಸಿ ಸಾಮಾಜಿಕ ಸಮಸ್ಯೆಗಳು, ರೈತರ, ವೇಶ್ಯಾವಾಟಿಕೆ ಕುರಿತು, ಜಾತಿಯ ಸಂಘರ್ಷ ಕುರಿತು ಹೀಗೆ ಸುಮಾರು ನಲವತ್ತು ಕಾದಂಬರಿಗಳನ್ನು ಬರೆದು ಸಮಾಜದಲ್ಲಿಯ ಅಂಕುಡೊಂಕು ತಿದ್ದುವ ಬಂಡಾಯದ ಸಾಹಿತಿಯಾಗಿ ರೂಪಗೊಂಡ ಮಹಾ ವಾಗ್ಮಿ ಬಸವರಾಜ ಕಟ್ಟಿಮನಿ

ಮೂಡಲಗಿ: ಬಡತನವನ್ನು ಅನುಭವಿಸುತ್ತಲೇ ತಮ್ಮ 14ನೇ ವಯಸ್ಸಿನಲ್ಲಿ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಸ್ವಾರ್ಥಕತೆಯ ಬಧುಕು ಪ್ರಾರಂಬಿಸಿ ಸಾಮಾಜಿಕ ಸಮಸ್ಯೆಗಳು, ರೈತರ, ವೇಶ್ಯಾವಾಟಿಕೆ ಕುರಿತು, ಜಾತಿಯ ಸಂಘರ್ಷ ಕುರಿತು ಹೀಗೆ ಸುಮಾರು ನಲವತ್ತು ಕಾದಂಬರಿಗಳನ್ನು ಬರೆದು ಸಮಾಜದಲ್ಲಿಯ ಅಂಕುಡೊಂಕು ತಿದ್ದುವ ಬಂಡಾಯದ ಸಾಹಿತಿಯಾಗಿ ರೂಪಗೊಂಡ ಮಹಾ ವಾಗ್ಮಿ ಬಸವರಾಜ ಕಟ್ಟಿಮನಿ ಎಂದು ದಾರವಾಡದ ಸಾಹಿತಿ, ಚಿಂತಕ ಡಾ. ಬಸವರಾಜ ಸಾದರ ಹೇಳಿದರು ಅವರು ಗುರುವಾರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 
ಕನ್ನಡ ವಿಭಾಗದ ಆತಿಥ್ಯದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಜರುಗಿದ ಬಸವರಾಜ ಕಟ್ಟೀಮನಿ ಅವರ ಜನ್ಮಶತಮಾನೋತ್ಸವ ನಿಮಿತ್ತವಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಕಟ್ಟೀಮನಿ ಬದುಕು-ಬರಹ: ಒಂದು ಸಮಗ್ರ ನೋಟ’ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು, ಅನುಭವದ ಸಾಹಿತ್ಯ ಒಂದಾದರೆ ಅನುಭಾವ ಸಾಹಿತ್ಯ ಇನ್ನೂಂದು ಕಟ್ಟಿಮನಿಯವರದು ಅನುಭವದ ಸಾಹಿತ್ಯ ತಾವು ಕಂಡುಂಡ ಬದುಕನ್ನೆ ಸಾಹಿತ್ಯವಾಗಿಸಿದವರು, ಅವರು ಒಂದು ಮಹಾಭಾತರ ಇದ್ದ ಹಾಗಿದ್ದರು ಹತ್ತನೇಯ ತರಗತಿ ಪಾಸಾಗದೆ ಅನೇಕ ಕಾದಂಬರಿಗಳನ್ನು ಬರೆದಿದ್ದರು ಅವರೊಬ್ಬ ಸಮಗ್ರ ವ್ಯಕ್ತಿಯಾಗಿದ್ದರು ಎಂದರು. ಬಸವರಾಜ ಕಟ್ಟಿಮನಿ ಪ್ರತಿಷ್ಟಾನದ ಅಧ್ಯಕ್ಷ ಮಲ್ಲಿಕಾರ್ಜುನ ಹೀರೆಮಠ ಅದ್ಯಕ್ಷತೆ ವಹಿಸಿ ಮಾತನಾಡಿ, ನವೋದಯದಲ್ಲಿ ಸೃಷ್ಟಿ, ಪ್ರೀತಿ ಪ್ರೇಮದ ಬಗ್ಗೆ ನವ್ಯದಲ್ಲಿ ವ್ಯಕ್ತಿ ಆಧಾರಿತ ಸಾಹಿತ್ಯ ರಚನೆಯಾಯಿತು ಆದರೆ ಬಂಡಾಯದಲ್ಲಿ ವರ್ಗ ಸಂಘರ್ಷದ, ಜಾತಿ ಸಂಘರ್ಷದ ಬಗ್ಗೆ ಸಾಹಿತ್ಯ ರಚನೆಯಾಯಿತು ಅದರ ಆಳ ಅರಿವಾಗಬೇಕಾದರೆ ಇಂಥ ಸಾಹಿತ್ಯದ ಮರು ಚಿಂತನೆ ಅಥವಾ ಮರು ಓದು ಆಗಬೇಕು ಎಂಬ ಗುರಿಯೊಂದಿಗೆ ಕಟ್ಟಿಮನಿ ಸಾಹಿತ್ಯದ ಬಗ್ಗೆ ಮರು ಚಿಂತನೆ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಅದರ ಪ್ರಯೋಜನ ಪದವಿ ವಿಧ್ಯಾರ್ಥಿಗಳು ಪಡೆಯುವದರ ಮೂಲಕ ಬಸವರಾಜ ಕಟ್ಟಿಮನಿಯವರನ್ನು ನೀವು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು, ಗೋಕಾಕದ ನಿವೃತ್ತ ಪ್ರಾಧ್ಯಾಪಕ ಸಾಹಿತಿ ಪ್ರೋ ಚಂದ್ರಶೇಖರ ಅಕ್ಕಿ ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಸಾಹಿತ್ಯವನ್ನು ರಚಿಸುವ ಮೂಲಕ ಶಾಸ್ವತ ಕಾರ್ಯ ಮಾಡಿದ್ದಾರೆ ಎನ್ನುವುದಕ್ಕೆ ಅವರು ಅಗಲಿದ ನೂರು ವರ್ಷಗಳ ನಂತರವೂ ನಾವು ಅವರನ್ನು ನೆನಪಿಸಿಕೊಳ್ಳುತ್ತಿರುವುದೇ ಸಾಕ್ಷಿ, ಅಂತಹ ತಾಕತ್ತು ಅವರ ಸಾಹಿತ್ಯದಲ್ಲಿತ್ತು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೆ ಕಾದಂಬರಿ ರೂಪದಲ್ಲಿ ಸಮಾಜದ ಮುಂದೆ ಇಡುವ ಕೆಲಸ ಬಸವರಾಜ ಕಟ್ಟಿಮನಿ ಮಾಡಿದರು ಎಂದರು ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ನಿರ್ದೇಶಕ ಎಮ್ ಎಚ್ ಸೋನವಾಲ್ಕರ ಮಾತನಾಡಿ, ಕಟ್ಟಿಮನಿಯವ ಶತಮಾನೋತ್ಸವ ಈ ಕಾಲೇಜಿನಲ್ಲಿ ಆಚರಿಸುವ ಮೂಲಕ ನಮ್ಮನೂ ಪ್ರತಿಷ್ಟಾನದ ಅಂಗವಾಗಿಸಿದ ಪ್ರತಿಷ್ಠಾನದ ಸದಸ್ಯರಿಗೆ ಕೃತ್ನಜ್ಞತೆ ಸಲ್ಲಿಸಿದರು. ಈಶ್ವರಚಂದ್ರ ಬೆಟಗೇರಿ ಕಟ್ಟಿಮನಿ ಕುರಿತು ಲಾವಣಿ ಪ್ರಸ್ತುತ ಪಡಿಸಿದರು ಕಾಲೇಜಿನ ಪ್ರಾಚಾರ್ಯ ಆರ್ ಎ ಶಾಸ್ರ್ತಿಮಠ ಮಾತನಾಡಿದರು ವೇದಿಕೆಯ ಮೇಲೆ ಪ್ರತಿಷ್ಠಾನದ ಶಿವಕುಮಾರ ಕಟ್ಟಿಮನಿ, ಸಂಸ್ಥೆಯ ಉಪಾಧ್ಯಕ್ಷ ಎಸ್ ಆರ ಸೋನವಾಲ್ಕರ, ವೇಂಕಟೇಶ್ವರ ಸೋನವಾಲ್ಕರ ಉಪಸ್ಥಿತರಿದ್ದರು ಸಾಹಿತಿಗಳಾದ ಡಾ. ವೈ.ಎಂ. ಯಾಕೊಳ್ಳಿ, ಮಾರುತಿ ದಾಸನ್ನವರ ಬಸವಣ್ಣೆಪ್ಪ ಕಂಬಾರ, ಮಹಾಲಿಂಗ ಮಂಗಿ ಪ್ರೊ. ಸಂಗಮೇಶ ಗುಜಗೊಂಡ, ರಜನಿ ಜೀರಗ್ಯಾಳ ಮತ್ತು ಸಾಹಿತ್ಯಾಸತ್ಕರು ಕಾರ್ಯಕ್ರಮದಲ್ಲಿ ಇದ್ದರು ಪ್ರೋ ಬಿ.ಆರ್ ದೇವರೆಡ್ಡಿ ಸ್ವಾಗತಿಸಿದರು. ಗ್ರಂಥಪಾಲಕ ಬಾಲಶೇಖರ ಬಂದಿ ಕಾರ್ಯಕ್ರಮ ನಿರ್ವಹಿಸಿದರು ಪ್ರೋ ಎ ಎಸ್ ಮೀಸಿನಾಯಕ ವಂದಿಸಿದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು