ನಿರಾಶ್ರಿತರಿಗೆ ಸಹಾಯ ಹಸ್ತ ನೀಡಿದ ಶಶಿ ಸಿದ್ನಾಳ ಪೌಂಡೇಶನ್

ಒಟ್ಟು ವೀಕ್ಷಣೆಗಳು : 85
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಉತ್ತರ ಕರ್ನಾಟಕದ ನಾನಾ ಕಡೆ ಪ್ರವಾಹವುಂಟಾಗಿದ್ದ ಕಾರಣ ಜಿಲ್ಲೆಯಲ್ಲಿ ಹಲವು ಮನೆಗಳು ಬಿದ್ದಿವೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ, ಜನರು ಇನ್ನು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಎಸ್.ಬಿ. ಸಿದ್ನಾಳ ಅವರ ಮೊಮ್ಮಗ ದಿಗ್ವಿಜಯ ಸಿದ್ನಾಳ ತಮ್ಮ ಶಶಿ ಸಿದ್ನಾಳ ಫೌಂಡೇಶನ್ ವತಿಯಿಂದ ಗೋಕಾಕ್ ತಾಲೂಕಿನ ಪ್ರವಾಹ ಪೀಡಿತರ ಕಾಳಜಿ ಕೇಂದ್ರದಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ನೀಡಿದ್ದಾರೆ. ಅಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಕೆಜಿ ಎಣ್ಣೆ, 1 ಕೆಜಿ ಹಿಟ್ಟು, ಉಡುಪುಳನ್ನು ಸೇರಿದಂತೆ ಮೂಲಭೂತ ವಸ್ತುಗಳನ್ನೊಳಗೊಂಡ ಕಿಟ್ ಗಳನ್ನು ಕಾಳಜಿ ಕೇಂದ್ರದ ನೋಡಲ್ ಅಧಿಕಾರಿಗೆ ಒಪ್ಪಿಸಿ ಸಹಾಯ ಹಸ್ತ ಚಾಚಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು