ಡಾ.ರವಿಕಾಂತ ‌ಪಾಟೀಲಗೆ ಒಲಿದು ಬಂತು ಮಹಾರಾಷ್ಟ್ರ ಅಚೀವರ್ ಪ್ರಶಸ್ತಿ

ಒಟ್ಟು ವೀಕ್ಷಣೆಗಳು : 127
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಚಿಕ್ಕೋಡಿ: ಜನ ಸೇವೆಯಿಂದಲೇ ಗಡಿಭಾಗದಲ್ಲಿ ಗುರುತಿಸಿಕೊಂಡಿರುವ ಸರಳತೆಯಿಂದಲೇ ದಿನದ 24 ಗಂಟೆಗಳ ಕಾಲ ರೋಗಿಗಳ ಆರೈಕೆ ಸಿದ್ಧರಾಗಿರುವ ವೈದ್ಯರು ಈ ಗಡಿಭಾಗದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಾ ಜನರ ಪ್ರೀತಿಗೆ ಪಾತ್ರರಾದ ಅಪರೂಪದ ವ್ಯಕ್ತಿ ಮಹಾರಾಷ್ಟ್ರದ-ಮಿರಜನ ಸೇವಾ ಸದನ ಲೈಫ್ ಲೈನ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ತಜ್ಞ ವೈದ್ಯ ಡಾ.ರವಿಕಾಂತ ‌ಪಾಟೀಲ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲ ಜನತೆಗೆ ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಈ ಅಪರೂಪದ ವೈದ್ಯನಿಗೆ ಈಗ ಮಹಾರಾಷ್ಟ್ರ ರಾಜ್ಯದ ಉನ್ನತ ಪ್ರಶಸ್ತಿಯಾದ ಮಹಾರಾಷ್ಟ್ರ ಅಚೀವರ್ ಪ್ರಶಸ್ತಿ ಒಲಿದು ಬಂದಿದೆ. ಗಡಿಭಾಗದ ರೋಗಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ ಜತೆಗೆ ಔಷದೋಪಚಾರವನ್ನು ನೀಡಿ ಸದಾ ಜನತೆಗೆ ಉತ್ತಮ ಸೇವೆಯನ್ನು ನಿರಂತರವಾಗಿ ನೀಡುತ್ತಿದ್ದಾರೆ. ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಇವರಿಗೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಈಗ ಡಾ.ಪಾಟೀಲ್ ಅವರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು‌  ಮಹಾರಾಷ್ಟ್ರ ಅಚೀವರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿ ಒಲಿದು ಬಂದಿದ್ದಕ್ಕೆ ಈ ಭಾಗದ ಜನರು, ಸಂಘ ಸಂಸ್ಥೆಗಳು, ವೈದ್ಯರು, ಡಾ.ರವಿಕಾಂತ ಅವರನ್ನು ಅಭಿನಂದಿಸಿದ್ದಾರೆ. ಮುಂಬಯಿನಲ್ಲಿ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು. ಅಮೆರಿಕಾದ ಕಾರ್ಡಿಯಾಲಾಜಿ ವೈದ್ಯಕೀಯ ಪದವಿ ಪಡೆದಿರುವ ಡಾ.ರವಿಕಾಂತ ಅವರು ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು