ನಾಗನೂರಿನ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೀ; ಡಾ.ಸಿದ್ದರಾಮ ಶ್ರೀ

ಒಟ್ಟು ವೀಕ್ಷಣೆಗಳು : 300
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಕಾಯಕಯೋಗಿ, ಮಹಾಪ್ರವಾದಿ, ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆಯ ರಜತ ಮಹೋತ್ಸವ ಹಾಗೂ ಡಾ. ಸಾವಳಾಗಿಶ್ವರ ದೇವರ ನಿರಂಜನ ಪಟ್ಟಾಭಿಷೇಕವನ್ನು ನೋಡಲು ಎರಡು ಕಣ್ಣು ಸಾಲದೆಂಬಂತೆ ನಾಗನೂರಿನಲ್ಲಿ ವೈಭವ ಮನೆ ಮಾಡಿದೆ...

ಮಲ್ಲಿಕಾರ್ಜುನ ಬಿ. ಕರೆರುದ್ರನ್ನವರ
ಬೆಳಗಾವಿ (ನಾಗನೂರ)

ನಿತ್ಯ ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ಯೋಗಿ, ಕಾಯಕವೇ ಪೂಜೆ, ಜನತೆಯೇ ಜಂಗಮವೆಂಬ ತತ್ವವನ್ನು ನಂಬಿ ಸಾಮಾನ್ಯರ ಶ್ರೀಗಳಾಗಿ ನಾಗನೂರಿನ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರೀ ಸಿದ್ದರಾಮ ಶ್ರೀಗಳಿಗೆ ಸಲ್ಲುತ್ತದೆ. ಗದುಗಿನ ತೋಂಟದಾರ್ಯ ಶ್ರೀ ಮಠದ ಉತ್ತರಾಧಿಕಾರಾಯಾಗಿ ನೇಮಕಗೊಂಡು ನಾಗನೂರು ರುದ್ರಾಕ್ಷಿ ಮಠದ ಪೂಜನೀಯ ಡಾ. ಶ್ರೀ ಸಿದ್ದರಾಮ ಸ್ವಾಮೀಜಿಯವರು ಅಪ್ಪಟ ಬಸವಣ್ಣನವರ ಅನುಯಾಯಿಗಳು. ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ನಿತ್ಯ ಕ್ರಾಂತಿ ಯೋಗಿಗಳು. ಸಮತೆಯ ಹಾಗೂ ಸಮಾಜ ಕಲ್ಯಾಣದ ಕನಸು ಹೊತ್ತವರು, ಸ್ವತಂತ್ರ ಲಿಂಗಾಯತ ಧರ್ಮದ ಸಾಧಕ ಬಾಧಕಗಳನ್ನು ಅರಿತು ಪ್ರಚುರ ಪಡಿಸಿದವರು. ಸಾಂಸ್ಕೃತಿಕ ಮತ್ತು ವಚನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವವರು ಡಾ.ಸಿದ್ದರಾಮ ಶ್ರೀಗಳು. 1988 ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿರುವ ರುದ್ರಾಕ್ಷಿಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಯಾರನ್ನು ಮಾಡಬೇಕೆಂದು ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಡಾ. ಶಿವಬಸವ ಸ್ವಾಮೀಜಿ ಅವರು ತೋಂಟದ ಶ್ರೀಗಳ ಸಲಹೆ ಕೇಳಿದ್ದರು ಆ ಸಂಧರ್ಭದಲ್ಲಿ ತೋಟದ ಶ್ರೀಗಳು ಸಿದ್ಧರಾಮ ಸ್ವಾಮೀಜಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಅವರ ಸಲಹೆಯಂತೆ ಸಿದ್ಧರಾಮ ಸ್ವಾಮೀಜಿಯವರನ್ನು 1989 ರಲ್ಲಿ ಉತ್ತರಾಧಿಕಾರಿಯನ್ನಾಗಿ ಪಟ್ಟ ಕಟ್ಟಲಾಯಿತು. 1994ರಲ್ಲಿ ಶಿವಬಸವ ಸ್ವಾಮೀಜಿ ಅವರು ಲಿಂಗೈಕ್ಯರದರು ತದನಂತರ ಸಿದ್ದರಾಮ ಶ್ರೀಗಳು ನಾಗನೂರು ರುದ್ರಾಕ್ಷಿಮಠಕ್ಕೆ ಪೀಠಾಧಿಪತಿಯಾದರು. ಅಂದಿನಿಂದ ಇಂದಿನವರೆಗೂ ಮಠದ ಎಲ್ಲ ಜವಾಬ್ದಾರಿಯನ್ನು ನೋಡಿಕೊಂಡು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಂಜಿನಿಯರಿಂಗ್‌ ಕಾಲೇಜುಗಳನ್ನು ಕಟ್ಟಿದ್ದಾರೆ. ಬಿ.ಇಡ್‌, ಐ.ಟಿ.ಐ ಸೇರಿದಂತೆ ಒಟ್ಟು 30ಕ್ಕಿಂತ ಹೆಚ್ಚು ಸಂಸ್ಥೆಗಳನ್ನು ಬೆಳಗಾವಿಯ ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಡಾ.ಸಿದ್ದರಾಮ ಶ್ರೀಗಳ ಶ್ರಮ ಅಷ್ಟಿಷ್ಟಲ್ಲ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಾಧು ಪರಂಪರೆಗೆ ವಿಶೇಷ ಗೌರವ ತಂದುಕೊಟ್ಟ ಕೀರ್ತಿ ನಾಗನೂರು ರುದ್ರಾಕ್ಷಿಮಠಕ್ಕೆ ಹಾಗೂ ಡಾ.ಸಿದ್ದರಾಮ ಶ್ರೀಗಳಿಗೆ ಸಲ್ಲುತ್ತದೆ. ವಚನ ಸಾಹಿತ್ಯಕ್ಕೆ ಪುನಶ್ಚೇತನ ನೀಡಲು ಬೆಳಗಾವಿಯ ರುದ್ರಾಕ್ಷಿ ಮಠದಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪಿಸಿದವರು ಡಾ. ಸಿದ್ದರಾಮ ಶ್ರೀಗಳು. ಹಳೆಯ ಕಾಲದ ಹಸ್ತಪ್ರತಿಗಳು ಹಾಗೂ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ನೂರಾರು ಗ್ರಂಥಗಳನ್ನು ಸಂಗ್ರಹಿಸಿದ್ದಾರೆ. ಲಿಂಗಾಯತ ಅಧ್ಯಯನ ಅಕಾಡೆಮಿ, ಸಿದ್ಧರಾಮೇಶ್ವರ ಮಾರ್ಗದರ್ಶಿ, ಲಿಂಗಾಯತ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯವನ್ನು ಸ್ಥಾಪಿಸಿ 16,000ಕ್ಕೂ ಹೆಚ್ಚು ಗ್ರಂಥಗಳನ್ನು ಸಂಗ್ರಹಿಸಿದ್ದಾರೆ. ಸ್ವಾಮೀಜಿಯವರು ಸ್ವತಃ ಹಲವು ಕೃತಿಗಳನ್ನು ರಚಿಸಿದ್ದು ವಚನಾರ್ಥ ಚಿಂತನ, ಭಕ್ತಿ ದರ್ಶನ, ಇಷ್ಟಲಿಂಗ ಪೂಜಾವಿಧಾನ, ಇಸ್ಲಾಂ ಧರ್ಮ ಸಂದೇಶ ಹಾಗೂ ಧರ್ಮ ಜ್ಯೋತಿ ಪ್ರಮುಖವಾದವುಗಳಾಗಿವೆ. 2006 ರಿಂದ ‘ಲಿಂಗಾಯತ ದರ್ಶನ’ ಮಾಸ ಪತ್ರಿಕೆಯು ಹೊರಬರುತ್ತಿದೆ. ಶ್ರೀಗಳ ಸಾಧನೆಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಶ್ರೀಗಳನ್ನು ಗೌರವಿಸಿದೆ. ಡಾ.ಸಿದ್ದರಾಮ ಶ್ರೀಗಳು ಶಿಕ್ಷಣ ಕ್ರಾಂತಿಯ ಜೊತೆ ಅನ್ನದಾಸೋಹಕ್ಕೂ ಮಹತ್ವ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಪ್ರಮುಖ ಸಮ್ಮೇಳನಗಳಲ್ಲಿ ದಾಸೋಹ ಏರ್ಪಡಿಸಿದ್ದಾರೆ. 2003ರಲ್ಲಿ ನಡೆದ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರಿಗೆ ಅನ್ನದಾಸೋಹ ಏರ್ಪಡಿಸಿದ್ದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಗಡಿನಾಡು ಬೆಳಗಾವಿಯಲ್ಲಿಯ ಕನ್ನಡದ ಚಟುವಟಿಕೆಗಳಿಗೆ ಶ್ರೀಗಳು ಸಾಕಷ್ಟು ಬೆಂಬಲ ನೀಡುತ್ತಾ ಬಂದಿದ್ದಾರೆ. ಹಲವು ಕನ್ನಡ ಕೃತಿಗಳನ್ನು ಮುದ್ರಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟದ ಮುಂಚೂಣಿಯನ್ನು ವಹಿಸಿಕೊಂಡದ್ದನ್ನು ಮರೆಯುವಂತಿಲ್ಲ. ಡಾ. ಸಿದ್ದರಾಮ ಶ್ರೀಗಳು ಶ್ರೀಮಂತಿಕೆಯ ಆಧ್ಯಾತ್ಮ ತತ್ವ ನಿಷ್ಠೆಯ ಗದಗ ತೋಂಟದಾರ್ಯ ಮಠಕ್ಕೆ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳಾಗಿ 20ನೇ ಪೀಠಾಧಿಪತಿಗಳಾಗಿ ಆಯ್ಕೆಯಾಗಿದ್ದು ಇತಿಹಾಸದ ಪುಟ ಸೇರಿದೆ. ಸದ್ಯ ನಾಗನೂರು ರುದ್ರಾಕ್ಷಿಮಠಕ್ಕೆ ಪೂಜ್ಯ ಡಾ.ಸಾವಳಗಿಶ್ವರ ದೇವರ ನಿರಂಜನ ಅವರ ಪಟ್ಟಾಧಿಕಾರ ನಡೆಯುತ್ತಿದೆ. ಪೂಜ್ಯ ಡಾ.ಸಾವಳಗಿಶ್ವರ ದೇವರ ಪಟ್ಟಾಭಿಷೇಕಕ್ಕೆ ಇಡಿ ನಾಗನೂರಿಗೆ ನಾಗನೂರು ಊರಿಗೆ ಹಬ್ಬದ ಕಳೆ ಬಂದಿದೆ, ಗ್ರಾಮಸ್ಥರಲ್ಲಿ ಜಾತ್ರೆಯ ಮೆರಗು ತಂದಿದೆ ಮನೆಗಳು ಸುಣ್ಣ ಬಣ್ಣಗಳಿಂದ ಅಲಂಕೃತವಾಗಿದ್ದರೆ ಜನರ ಮನಸ್ಸುಗಳು ತಮ್ಮ ಬಂಧುಗಳು, ಸ್ನೇಹಿತರನನ್ನು ಕೈ ಬೀಸಿ ಕರೆದಿವೆ ಒಟ್ಟಿನಲ್ಲಿ ಕಾಯಕಯೋಗಿ, ಮಹಾಪ್ರವಾದಿ,  ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆಯ ರಜತ ಮಹೋತ್ಸವ ಹಾಗೂ ಡಾ. ಸಾವಳಾಗಿಶ್ವರ ದೇವರ ನಿರಂಜನ ಪಟ್ಟಾಭಿಷೇಕವನ್ನು ನೋಡಲು ಎರಡು ಕಣ್ಣು ಸಾಲದೆಂಬಂತೆ ನಾಗನೂರಿನಲ್ಲಿ ವೈಭವ ಮನೆ ಮಾಡಿದಂತರು ಸತ್ಯ

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು