ಮಂಡ್ಯ ಲೋಕಸಭೆ ಅಖಾಡದಲ್ಲಿ ರೋಚಕ ಟ್ವಿಸ್ಟ್ ಸುಮಲತಾ ಮಂಜೇಗೌಡ ಕಣದಿಂದ ಹಿಂದೆ ಸರಿದಿದ್ದು ಯಾಕೆ?

ಒಟ್ಟು ವೀಕ್ಷಣೆಗಳು : 2,964
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮಂಡ್ಯ: ಮಂಡ್ಯದ ಲೋಕಸಭೆ ಅಖಾಡದಲ್ಲಿ ರೋಚಕ ಟ್ವಿಸ್ಟ್ ಸುಮಲತಾ ಮಂಜೇಗೌಡ ಕಣದಿಂದ ಹಿಂದೆ ಸರಿದಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಮಂಡ್ಯದಲ್ಲಿ ಈ ಹಿಂದೆ ಸುಮಲತಾ ಹೆಸರಿನಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುಮಲತಾ ಮಂಜೇಗೌಡ ಅವರ ಪತಿ ಮಂಜೇಗೌಡ ಮಾತನಾಡಿ ಯಾರದ್ದೋ ಮಾತುಕೇಳಿ ನನ್ನ ಪತ್ನಿ ನಾಮಪತ್ರ ಸಲ್ಲಿಸಿದ್ದಾಳೆ. ನಮಗೆ ರಾಜಕೀಯದ ಬಗ್ಗೆ ಏನು ಗೊತ್ತಿಲ್ಲ ನಾನು ದರ್ಶನ ಅವರ ಅಭಿಮಾನಿ ಆದ್ದರಿಂದ ನಾಳೆ ನಾನು ಖುದ್ದಾಗಿ ನನ್ನ ಪತ್ನಿಯ ಜೊತೆ ಹೋಗಿ ನಾಮಪತ್ರ ಹಿಂದೆಕೊಳ್ಳುತ್ತೇನೆಂದು ಹೇಳಿದ್ದಾರೆ. ಈ ಹೇಳೀಕೆಯಿಂದ ಮೂವರು ಸುಮಲತಾ ಹೆಸರಿನವರನ್ನು ನಾಮಪತ್ರ ಸಲ್ಲಿಸುವಂತೆ ಹೇಳಿದ್ದು ಯಾರು ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು, ಈ ಎಲ್ಲ ವಿದ್ಯಮಾನಗಳು ಮಂಡ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುತ್ತಿವೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು