ನಾಡ ವಿರೋಧಿಗಳ ಬಾಗಿಲು ತಟ್ಟಿದ ಕನ್ನಡದ ಅಭ್ಯರ್ಥಿ : ಕನ್ನಡ ಹೋರಾಟಗಾರರ ಆಕ್ಷೇಪ

ಒಟ್ಟು ವೀಕ್ಷಣೆಗಳು : 3,166
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಲೋಕಸಭೆ ಚುನಾವಣೆಗೆ ಜನರ ಮನ ಗೆಲ್ಲಲ್ಲು ರಾಜಕೀಯ ಪಕ್ಷಗಳು ತೀವ್ರ ಪೈಪೋಟಿ ನಡೆಸಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಮರಾಠಿ ಮತಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇಂದು ಎಂ.ಇ.ಎಸ್. ನಾಯಕ ಮಾಜಿ ಮಹಾಪೌರ ಹಾಗೂ ಮಾಜಿ ಶಾಸಕ ಸಂಬಾಜಿ ಪಾಟೀಲರನ್ನು ಭೇಟಿಯಾಗಿ ಮಾತುಕತೆ ನಡೆಸಿ ತಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದು ಕನ್ನಡಿಗರ ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಯುಕೆ ಟೈಮ್ಸ್ ನೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಪ್ರತಿಬಾರಿ ಬಿಜೆಪಿ ನಾಯಕರದ್ದು ಇದೆ ಆಗಿದೆ ಚುನಾವಣೆ ಸಂದರ್ಭದಲ್ಲಿ ನಾಡದ್ರೋಹಿಗಳ ಜೊತೆ ಕೈ ಜೋಡಿಸಿ ಬೆಂಬಲ ಪಡೆಯುತ್ತಿರುವುದು ಸರಿಯಲ್ಲ. ಇದೆ ಸುರೇಶ ಅಂಗಡಿ ಈ ಹಿಂದೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದನ್ನು ಮರೆಯಬಾರದು. ಅವರಿಗೆ ಮತ ಕೇಳಲು ಇಲ್ಲಿಯೇ ಸಾಕಷ್ಟು ಕನ್ನಡಿಗರಿದ್ದಾರೆ, ಅದನ್ನು ಬಿಟ್ಟು ನಾಡದ್ರೋಹಿ ಎಂ.ಇ.ಎಸ್. ನಾಯಕರ ಮನೆ ಬಾಗಿಲು ತಟ್ಟಿದ್ದು ಸರಿಯಲ್ಲ. ಇದೆ ಚಾಳಿ ಮುಂದುವರೆದರೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೂ ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು