ನನ್ನ ಹೆಸರು ದುರ್ಬಳಕೆ, ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ: ಅಣ್ಣಾಸಾಹೇಬ್ ಜೊಲ್ಲೆ

ಒಟ್ಟು ವೀಕ್ಷಣೆಗಳು : 3,014
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಚಿಕ್ಕೋಡಿ: ಸ್ಥಳೀಯ ರಾಜಕೀಯದಲ್ಲಿ ರಾಜ್ಯ ಮಟ್ಟದ ಸುದ್ದಿ ಮಾಧ್ಯಮದಾವೊಂದರ ಹೆಸರನ್ನು ಬಳಸಿಕೊಂಡು ಅಣ್ಣಾ ಸಾಹೇಬ್ ಅವರ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ, ಇದು ಕುತಂತ್ರದ ರಾಜಕಾರಣ ನಾನು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಲ್ಲ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಸುದ್ದಿ ಮಾದ್ಯಮದಲ್ಲಿ ಒಂದರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಯಾವತ್ತಿದ್ದರೂ ಕಾಂಗ್ರೆಸ್‍ಗೆ ಮತ ನೀಡುತ್ತಾರೆ ಅವರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಮೀಸಲು, ನನಗೆ ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳು ಬೇಡ ಎಂಬ ಸಂದೇಶ ಸಾರುವ ಚಿತ್ರಗಳನ್ನು ಸ್ಥಳೀಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಕುರಿತು ಯುಕೆ ಟೈಮ್ಸ್‍ಗೆ ಸ್ಪಷ್ಟನೆ ನೀಡಿದ ಅಣ್ಣಾಸಾಹೇಬ್ ಜೊಲ್ಲೆ ಅವರು ಇದು ಸಂಪೂರ್ಣ ಸುಳ್ಳು ಸುದ್ದಿ ಇದುವರೆಗೂ ನಾನು ಯಾವ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಲ್ಲ, ನೀಡುವುದು ಇಲ್ಲ. ನನಗೆ ಎಲ್ಲ ಮತದಾರರು ಬೇಕು ಎಲ್ಲರೂ ನನ್ನವರೇ ಎಂದು ಹೇಳಿದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು