20 ರೂ ಮುಖಬೆಲೆಯ ಹಸಿರು ಹಳದಿ ಬಣ್ಣದ ಹೊಸನೋಟು ಬಿಡುಗಡೆ

ಒಟ್ಟು ವೀಕ್ಷಣೆಗಳು : 273
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ದೆಹಲಿ: 20 ರೂ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡುವುದಾಗಿ ಆರ್‍ಬಿಐ ತಿಳಿಸಿದೆ. ಮಹಾತ್ಮಾ ಗಾಂಧಿ ಭಾವಚಿತ್ರ ಹಾಗೂ ಹಸಿರು ಹಳದಿ ಬಣ್ಣದಿಂದ ಕೂಡಿರುವ ಈ ನೋಟನ್ನು ಶೀಘ್ರದಲ್ಲೆ ಚಲಾವಣೆಗೆ ತರುವುದಾಗಿ ಕೇಂದ್ರ ಬ್ಯಾಂಕ್ ಏ.26 ರಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ ಹಾಗೂ ನೋಟಿನ ಮೇಲೆ ಆರ್‍ಬಿಐ ಗೌವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ ಎಂದು ತಿಳಿಸಿದೆ.

ಹೊಸ 20 ರೂ ನೋಟಿನಲ್ಲಿ ಯಲ್ಲೋರಾ ಗುಹೆಗಳ ಚಿತ್ರ, ಮಹಾತ್ಮಾ ಗಾಂಧಿ ಅವರ ಭಾವಚಿತ್ರ ನೋಟಿನ ಮದ್ಯದಲ್ಲಿ ಹಾಗೂ ಸಣ್ಣ ಅಕ್ಷರಗಳಲ್ಲಿ ಆರ್‍ಬಿಐ, ಭಾರತ, ಇಂಡಿಯಾ, 20 ಎಂಬ ಪದಗಳು ಇರಲಿವೆ ಎಂದು ಆರ್‍ಬಿಐ ತಿಳಿಸಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು