ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿದ ಜಾರಕಿಹೊಳಿ ಕುಟುಂಬ.

ಒಟ್ಟು ವೀಕ್ಷಣೆಗಳು : 870
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಕುಂಟುಂಬದ ಪಾತ್ರ ಮಹತ್ವ ಪಡೆದಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದರೆ ಜಾರಕಿಹೊಳಿ ಬ್ರದರ್ಸ್ ಬೇಕೆ ಬೇಕು. ಸರ್ಕಾರ ಯಾವುದೇ ಆಗಲಿ ಸಿ.ಎಂ ಯಾರೇ ಆಗಲಿ ಜಾರಕಿಹೊಳಿ ಮನೆತನಕಂತು  ಮಂತ್ರಿಗಿರಿ ಪಿಕ್ಸ್ ಎಂಬ ಮಾತಿದೆ “ಜಾರಕಿಹೊಳಿ ಸಹೋದರರಿಂದ ಯಾವುದೇ ???ಂದರೆ ಬರಬಾರದು ಎಂದರೆ ಅವರು ಬೇಡಿದ ಖಾತೆಯನ್ನು ಅವರಿಗೆ ಕೆuಟಿಜeಜಿiಟಿeಜಡಬೇಕು. ಅವರು ಕೇಳಿದ ಖಾತೆ ಸಿಕ್ಕರೆ ಸರ್ಕಾರಕ್ಕೆ ಆಗಿರಬಹುದು ಅಥವಾ ಪಕ್ಷಕ್ಕೆ ಆಗಿರಬಹುದು ಯಾವುದೇ ಆತಂಕ ಇರುವುದಿಲ್ಲ.’ ಸದ್ಯ ಜಾರಕಿಹೊಳಿ ಕುಟುಂಬದಲ್ಲಿ  ರಾಜಕೀಯದಲ್ಲಿ ಸಕ್ರಿಯವಾಗಿರುವವರೆಂದರೆ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಹಾಗೂ ಮತ್ತೊಬ್ಬ ಸಹೋದರ ಲಖನ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಸದ್ಯ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೆಯ ತಲೆಮಾರು ಪ್ರವೇಶವಾಗಿದೆ. ಜಿಲ್ಲಾ ಕೆಎಂಎಫ್ ನ ನಿರ್ದೇಶಕರಾಗಿ ರಮೇಶ ಜಾರಕಿಹೊಳಿ ಪುತ್ರ ಅಮರ್ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗುವುದರ ಮುಖಾಂತರ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಸಕ್ಕರೆ ಕಾರ್ಖನೆಯನ್ನು ಹೊಂದಿರುವ ಜಾರಕಿಹೊಳಿ ಕುಟುಂಬದವರು ದೊಡ್ಡ ಉದ್ಯಮಿಗಳು. ಉದ್ಯಮದ ಜೊತೆಗೆ ರಾಜಕೀಯವನ್ನು ಮಾಡುತ್ತಾ, ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಜಾರಕಿಹೊಳಿ ಸಹೋದರರು ಗುರುತಿಸಿಕೊಂಡಿದ್ದಾರೆ. ಆದರೆ ಸದ್ಯ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರುವ ಚಟುವಟಿಕೆ ಆರಂಭಿಸಿದ್ದು ರಾಜ್ಯ ರಾಜಕೀಯದಲ್ಲಿ ತಲ್ಲಣ ಆರಂಭಿಸಿದ್ದಾರೆ. ಒಂದು ವೇಳೆ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದರೆ ದೋಸ್ತಿ ಸರ್ಕಾರಕ್ಕೆ ಕಂಟಕ ಪಿಕ್ಸ್ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು