ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ರೆ ಸರ್ಕಾರಿ ಯೋಜನೆಗಳು ಧಕ್ಕಲ್ಲ: ತಾರತಮ್ಯ ತೋರುತ್ತಿರುವ ಅಧಿಕಾರಿಗಳು

ಒಟ್ಟು ವೀಕ್ಷಣೆಗಳು : 863
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಕುಡಚಿ: ಮತದಾನ ಪ್ರಜಾಪ್ರಭುತ್ವದ ಹಕ್ಕು, ಮತ ಚಲಾಯಿಸುವುದು ಪ್ರತಿಯೊಬ್ಬನ ಹಕ್ಕು ಕೂಡ. ಅದೇ ರೀತಿ ಮತವನ್ನು ಯಾರಿಗೆ ಬೇಕಾದರೂ ನೀಡಬಹುದು, ಅದು ಅವರವರ ಇಷ್ಟ. ಆದರೆ ಕುಡಚಿ ಪಟ್ಟಣದಲ್ಲಿ ಮತ ಚಲಾಯಿಸಿದ್ದೇ ತಪ್ಪಾಗಿದೆ ಎಂಬಂತೆ ಕುಡಚಿ ಶಾಸಕ ಪಿ.ರಾಜೀವ್ ತಾರತಮ್ಯ ಮೆರೆಯುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಕೆಲ ಕುಡಚಿ ನಿವಾಸಿಗಳು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ ಜನರಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿ ಗುಡಿಸಲು ಮುಕ್ತ ಗ್ರಾಮಗಳಾಗಲಿ ಎಂಬ ಉದ್ದೇಶದಿಂದ ಬಡವರಿಗೆ, ನಿರಾಶ್ರಿತರಿಗೆ ಮನೆ ಕಟ್ಟಿ ಕೊಡಲು ಸರ್ಕಾರ ನೆರವು ನೀಡುತ್ತದೆ. ಹೀಗೆ ಸರ್ಕಾರದ ಯೋಜನೆಗಳನ್ನು ನಂಬಿ ತಮ್ಮ ಮನೆಗಳನ್ನು ನೆಲಸಮ ಮಾಡಿ ಹೊಸ ಮನೆ ಕಟ್ಟಿಕೊಳ್ಳಬೇಕು ಎಂಬ ತವಕದಲ್ಲಿದ್ದ ಕೆಲ ಕುಟುಂಬಗಳಿಗೆ ಕುಡಚಿ ಶಾಸಕ ಪಿ.ರಾಜೀವ್ ಹಾಗೂ ಸ್ಥಳೀಯ ವಾರ್ಡ ಸದಸ್ಯ ಸಣ್ಣಕ್ಕಿ ಸೇರಿ ಇನ್ನು ಕೆಲ ಮುಖಂಡರು ತಾರತಮ್ಯ ಮಾಡಿ ಕೇವಲ ಬಿಜೆಪಿ ಬೆಂಬಲಿತ ವ್ಯಕ್ತಿಗಳಿಗಷ್ಟೆ ಸೂರು ಕಲ್ಪಿಸುವಲ್ಲಿ ನೆರವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. 

ಇನ್ನುಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಕುಟುಂಬಗಳಿಗೆ ಯೋಜನೆಗಳು ಮಾನ್ಯವಾಗದಂತೆ ತಡೆಹಿಡಿದಿದ್ದಾರೆ, ನಾವೂ ಮತ್ತು ಪಕ್ಕದ ನಿವಾಸಿ(ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ವ್ಯಕ್ತಿ)ಸೇರಿ ಒಂದೆ ದಿನ ಡಿಡಿ ಕಟ್ಟಿದ್ದೇವೆ ಆದರೆ ಆತನ ಮನೆಯ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ ಆದರೆ ನಮ್ಮ ಮನೆಯ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಮೂರು ತಿಂಗಳ ಹಿಂದೇಯೆ ಸಾಲ ಮಾಡಿ ಡಿಡಿ ತುಂಬಿದ್ದೇನೆ ಎಂದು ಹೇಳುತ್ತಾರೆ ಅರುಣ ಬೀರಣಗಿ. ಮನೆ ನೆಲಸಮ ಮಾಡಿ ಹೊರಗಡೆ ವಾಸಿಸುವದಾಗಿದೆ, ನಮಗೆ ಬೇಗನೆ ಮನೆ ನಿರ್ಮಾಣ ಮಾಡಿಕೊಡಬೇಕು. ಬಿಜೆಪಿಯವರ ಮನೆ ಕೆಲಸಗಳು ಹೇಗೆ ಬೇಗಬೇಗ ಆಗುತ್ತವೆಯೋ ಅದೆ ರೀತಿ ನಮ್ಮ ಕೆಲಸಗಳು ಆಗಬೇಕು ಹಾಗೂ ಇದರಲ್ಲಿ ಪಿ.ರಾಜೀವ ಅವರು ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಕುಡಚಿಯ ಇನ್ನೊಬ್ಬ ನೊಂದ ವ್ಯಕ್ತಿ ಹೇಳಿದರು.

ಈ ಕುರಿತು ಸ್ಪಷ್ಟಣೆ ನೀಡದ ಪಿ.ರಾಜೀವ್ ಅವರು ಮುಂದಿನ ದಿನಗಳಲ್ಲಿ ಎಲ್ಲ ಪ್ರಜೆಗಳು ತಮ್ಮವರೆ ಎಂದು ಯಾವುದೇ ತಾರತಮ್ಯ ಮಾಡದೆ ಬಡ ನಿವಾಸಿಗಳಿಗೆ ಸೂರು ಕಲ್ಪಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು