ಗಬ್ಬೆದ್ದು ನಾರುತಿದೆ ಹೂ ಬಳ್ಳಿ ನಗರ

ಒಟ್ಟು ವೀಕ್ಷಣೆಗಳು : 323
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಹುಬ್ಬಳ್ಳಿ: ಹುಧಾ ಪಾಲಿಕೆ ಕಾರ್ಯವೈಖರಿಗೆ ಜನಸಾಮಾನ್ಯರ ಹಿಡಿಶಾಪ ಹಾಕುತಿದ್ದು ಎಲ್ಲಿಂದರಲ್ಲಿ ಒಳಚರಂಡಿ ನೀರಿನಿಂದ ಗಬ್ಬೆದ್ದು ನಾರುತಿದೆ. ಚೆನ್ನಮ್ಮ ಸರ್ಕಲ್ ಹಾಗೂ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕೂಗಳತೆಯ ದೂರದಲ್ಲಿರುವ ಸಿಟಿ ಕ್ಲಿನಿಕ್ ಮುಂದೆ ಒಳಚರಂಡಿ ಒಡೆದು ರಸ್ತೆ ತುಂಬೆಲ್ಲಾ ನೀರು ಹರಿಯಿತಿದೆ. ಪ್ರಸಕ್ತ ವರ್ಷದ ಆರಂಭದಲ್ಲೇ ಒಂದೆರಡು ಭಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದೆ ತಡ ಮಹಾನಗರದ ಬಹುತೇಕ ಬಡಾವಣೆ, ಕಾಲೋನಿ ಹಾಗೂ ಗಲ್ಲಿಗಳಲ್ಲಿ ಒಳಚರಂಡಿ ಒಡೆದು ಹೋಗಿ ಮನೆ ಹಾಗೂ ಬಡಾವಣೆಗಳಲ್ಲಿ ಭಾರಿ ಪ್ರಮಾಣದಲ್ಲಿ ಕೊಳಚೆ ನೀರು ಸಂಗ್ರಹಣೆಗೊಂಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲಿಕೆ ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮೈಗಳ್ಳತನ ಪ್ರದರ್ಶಿಸುತ್ತಿರುವುದು ಸಹಜವಾಗಿಯೇ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಒಳಚರಂಡಿಗಳ ಸ್ವಚ್ಛತೆಗೆ ಪಾಲಿಕೆ ಮೊದಲಿನಿಂದಲೂ ಆಸಕ್ತಿ ವಹಿಸಿಲ್ಲ ಎಂಬುದನ್ನು ಪುರಪಿತೃಗಳೇ ಹತ್ತು ಹಲವು ಬಾರಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಉದಾಹರಣೆಳುಂಟು. ಇಲ್ಲಿನ ರಸ್ತೆಯಲ್ಲಿನ ಒಳಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆ ಮೇಲೆಲ್ಲ ಕೊಳಚೆ ನೀರು ಪಸರಿಸಿಕೊಂಡ ಪರಿಣಾಮ ವಾರದ ಸಂತೆಗೂ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಿ ಮೂರು ದಿನಗಳು ಆಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸದೇ ಇರುವುದರಿಂದ ಶ್ರೀಸಾಮಾನ್ಯರು ಇದರ ಪರಿಣಾಮ ಎದುರಿಸುವಂತಾಗಿದೆ.

ಪ್ರತಿಷ್ಠತ ಬಡಾವಣೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಕೊಳಚೆ ನೀರು ರಸ್ತೆ ಮೇಲೆಲ್ಲ ಹರಿದಾಡಿತು. ಮಾತ್ರವಲ್ಲದೇ, ಅಲ್ಲಿನ ಮನೆಗಳಿಗೂ ಕೊಳಚೆ ನೀರು ನುಗ್ಗಿದ ಪರಿಣಾಮ ಸಹಜವಾಗಿಯೇ ಆ ಪ್ರದೇಶದಲ್ಲಿ ಜನರ ಸಂಚಾರಕ್ಕೆ ಸಂಚಕಾರ ಬಂದಿದೆಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು