ಹುಣಶ್ಯಾಳ ಗ್ರಾಮದಲ್ಲಿ ನೂತನ ಸಂತೆ ಮಾರುಕಟ್ಟೆ ಚಾಲನೆ

ಒಟ್ಟು ವೀಕ್ಷಣೆಗಳು : 912
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್


ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನೂತನ ಸಂತೆ ಮಾರುಕಟ್ಟೆಯನ್ನು ಪ್ರಾರಂಭ ಮಾಡಲಾಗಿದೆ. ಗ್ರಾಮದಲ್ಲಿ 10500ಕ್ಕೂ ಹೆಚ್ಚು ಜನಸಂಖ್ಯೆ ಇದೆ, ಗ್ರಾಮದಲ್ಲಿ ಪ್ರತಿ ವರ್ಷವೂ ಜಾತ್ರಾ ಮಹೋತ್ಸವಗಳು ನಡೆಯುವವು, ಆದ್ದರಿಂದ ಇಲ್ಲಿನ ಜನರು ಬೇರೆ ಗ್ರಾಮಕ್ಕೆ ಹೋಗಿ ಸಂತೆ ಮಾಡಿಕೊಂಡು ಬರಬೇಕಾಗಿತ್ತು, ಅಷ್ಟೇ ಅಲ್ಲದೇ ಹುಣಶ್ಯಾಳ ಗ್ರಾಮ ಘಟಪ್ರಭಾ ನದಿ ದಂಡೆಯ ಮೇಲಿರುವುದರಿಂದ ನೀರಾವರಿ ಪ್ರದೇಶವಾಗಿದೆ. ಇಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದು, ಪಕ್ಕದ ಊರಿನ ಮಾರುಕಟ್ಟೆಗಳಲ್ಲಿ ಮಾರುವ ಸ್ಥಿತಿ ನಿರ್ಮಾಣವಾಗಿತ್ತು, ಆದರೆ ಈ ಗ್ರಾಮದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಿರುವುದರಿಂದ ಎಲ್ಲರಿಗೂ ಅನುಕೂಲವಾಗಿದೆ. 

ಮಾರುಕಟ್ಟೆಯ ಉದ್ಘಾಟನೆಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು, ದಿವ್ಯಸಾನಿದ್ಯ ಪ.ಪೂ.ಶ್ರೀ ನಿಜಗುಣ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮ್ ಹುಣಶ್ಯಾಳ, ಸಾನಿದ್ಯ ಶ್ರೀ ಶಿವಲಿಂಗೇಶ್ವರ್ ಮಹಾಸ್ವಾಮಿಗಳು ಸಿದ್ದಾಂತ್ ಆಶ್ರಮ ಹುಣಶ್ಯಾಳ ಪಿ.ಜಿ, ಅಧ್ಯಕ್ಷತೆಯನ್ನು ಶ್ರೀಮಂತಿ ಯಮನವ್ವಾ ಭೀಮನಾಯ್ಕ ನಾಯ್ಕ್ ಗ್ರಾ.ಪಂ ಅಧ್ಯಕ್ಷರು ವಹಿಸಿದ್ದರು. ಬಸವ್ವಾ ಕಾ.ಕುಳ್ಳೂರ್ ಜಿ.ಪಂ ಸದ್ಯಸರು, ಬಸವರಾಜ ಉ.ಹುಕ್ಕೇರಿ ಗ್ರಾ.ಪಂ ಉಪಾಧ್ಯಕ್ಷರು, ಶಿವಾನಂದ ಎಸ್.ಗುಡಸಿ ಪಿ.ಡಿ.ಒ ಗ್ರಾ.ಪಂ ಹುಣಶ್ಯಾಳ ಪಿ.ಜಿ, ಆರ್.ವಾಯ್.ವಡೇರ್ ಲೆಕ್ಕ ಸಹಾಯಕರು ಗ್ರಾ.ಪಂ ಹುಣಶ್ಯಾಳ ಪಿ.ಜಿ, ಮಂಜುಳಾ ಅ.ಡಬ್ಬನ್ನವರ, ಸಂಜು ಭೀ.ಮ್ಯಾಗಡಿ, ಬಸಗೌಡ ರಾ.ನಾಯ್ಕ್, ಸಿದ್ದವ್ವಾ ಕ.ಶೆಕ್ಕಿ, ಶ್ರೀಶೈಲ ಮ.ದೇಶನೂರ್, ಶಂಕರ್ ದುಂ.ಇಂಚಲ್, ಶಾಂತವ್ವಾ ಅ.ಗಡ್ಡಿ, ಶಿವನಿಂಗಪ್ಪಾ ಹೊ.ಹಳ್ಳೂರ್, ಸುಮಿತ್ರಾ ಬ.ನನ್ನಾರಿ, ಅರ್ಜುನ ಲ.ನನ್ನಾರಿ, ನೂರಜಾನ್ ಅ.ನಧಾಪ, ಅನೂಸೂಯಾ ಶಿ.ಅಥಣಿ, ಲಾಲಸಾಬ ನಿ.ಜಮಾದಾರ, ಮಹಾದೇವಿ ಬ.ಆಡಕಾಯಿ, ಪ್ರಕಾಶ ರಾ.ತಳವಾರ್, ಸವಿತಾ ಭೀ.ಕಾಡಾಪೂರ್ ಹಾಗೂ ಊರಿನ ಸರ್ವ ಗ್ರಾಮಸ್ಥರು ಭಾಗವಹಿಸಿದರು


ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು