ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಗಳಿಗೆ ಆಶಾಕಿರಣವಾದ ಚಿಕ್ಕೋಡಿಯ KLECET ಇಂಜಿನಿಯರಿಂಗ್ ಕಾಲೇಜ್

ಒಟ್ಟು ವೀಕ್ಷಣೆಗಳು : 2,739
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಇಂಜನೀಯರಿಂಗ ಕೋರ್ಸ್ ಒಳ್ಳೆಯ ಕೋರ್ಸ್ ಆಗಿದೆ, ಆದರೆ ಅದನ್ನು ಯಾವ ಕಾಲೇಜನಲ್ಲಿ ಮಾಡಬೇಕು ಯಾವುದು ಉತ್ತಮ, ಎಲ್ಲಿ ಹೆಚ್ಚು ಕ್ಯಾಂಪಸ್ ಸೆಲೆಕ್ಷನ್ ಆಗುತ್ತವೆ, ಎಲ್ಲಿ ತರಬೇತಿ ಕೇಂದ್ರಗಳು ಉತ್ತಮ ಬೋಧನೆ, ಬೋಧಕರು ಇರುತ್ತಾರೋ ಅದು ತಾನೇ ಉತ್ತಮ.. ಅಂತಹ ಕಾಲೇಜ್‍ಗೆ ಸೇರಿಸಿದರೆ ಒಳ್ಳೆಯ ಕೆಲಸ ಹಿಡಿದು ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯ ಅಲ್ಲವೇ.

ಚಿಕ್ಕೋಡಿ: ಇಂಜನೀಯರಿಂಗ್ ಮೊದಲಿನಿಂದಲೂ ಎಲ್ಲರ ಅಚ್ಚುಮೆಚ್ಚಿನ ಕೋರ್ಸ್. ಇದು ದೇಶ-ವಿದೇಶಗಳಲ್ಲಿ ಒದಗಿಸುವ ಉದ್ಯೋಗಾವಕಾಶಗಳು ಇದಕ್ಕೆ ಕಾರಣವಾಗಿರಬಹುದು. ಇಂಜನೀಯರಿಂಗ್ ಕ್ಷೇತ್ರ ಇತ್ತೀಚೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಕೊಂಡಿದ್ದು, ಮನೆಯಲ್ಲಿ ಕುಳಿತು ಕೆಲಸ ಮಾಡುವ ಅವಕಾಶವನ್ನೂ ಒದಗಿಸುತ್ತಿದೆ. ಇಂಜನೀಯರಿಂಗ್ ಇಲ್ಲದ ಕ್ಷೇತ್ರವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಆಕ್ರಮಿಸಿದೆ. ಲ್ಯಾಪಟಾಪ್, ಮೊಬೈಲ್ ಹೀಗೆ ದಿನನಿತ್ಯದ ಬಳಕೆಯ ವಸ್ತುಗಳೆಲ್ಲವೂ ಎಂಜನೀಯರಗಳ ಆವಿಷ್ಕಾರವೇ ಆಗಿವೆ. 

ಇಂಜನೀಯರಿಂಗ ಕೋರ್ಸ್ ಒಳ್ಳೆಯ ಕೋರ್ಸ್, ಆದರೆ ಅದನ್ನು ಯಾವ ಕಾಲೇಜನಲ್ಲಿ ಮಾಡಬೇಕು ಯಾವುದು ಉತ್ತಮ, ಎಲ್ಲಿ ಹೆಚ್ಚು ಕ್ಯಾಂಪಸ್ ಸೆಲೆಕ್ಷನ್ ಆಗುತ್ತವೆ, ಎಲ್ಲಿ ತರಬೇತಿ ಕೇಂದ್ರಗಳು ಉತ್ತಮ ಬೋಧನೆ, ಬೋಧಕರು ಇರುತ್ತಾರೋ ಅದು ತಾನೇ ಉತ್ತಮ.. ಅಂತಹ ಕಾಲೇಜ್‍ಗೆ ಸೇರಿಸಿದರೆ ಒಳ್ಳೆಯ ಕೆಲಸ ಹಿಡಿದು ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯ ಅಲ್ಲವೇ.

ಚಿಕ್ಕೋಡಿ ಕೆ.ಎಲ್.ಇ. ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ: ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿರುವ ಕೆಎಲ್‍ಇ ಸಂಸ್ಥೆಯು ಚಿಕ್ಕೋಡಿ ಪಟ್ಟಣದಲ್ಲಿ ಸ್ಥಾಪಿಸಿರುವ ಇಂಜಿನಿಯರಿಂಗ್ ಮಹಾವಿದ್ಯಾಲಯವು ಗುಣಾತ್ಮಕ ತಾಂತ್ರಿಕ ಶಿಕ್ಷಣ ನೀಡುವ ಮೂಲಕ ಇಂಜನೀಯರಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಅಷ್ಟೆ ಅಲ್ಲದೆ ಗಡಿ ಭಾಗ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. 

ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರು ಕಂಡಿರುವ ಕನಸಿನಂತೆ ಹಳ್ಳಿಯ ವಿದ್ಯಾರ್ಥಿಗಳಿಗೂ ಉನ್ನತ ತಾಂತ್ರಿಕ ಶಿಕ್ಷಣ ದೊರೆಯಬೇಕು ಎಂಬ ಆಶಾಭಾವದೊಂದಿಗೆ 2008ರಲ್ಲಿ ಕೆಎಲ್‍ಇ ಸಂಸ್ಥೆ  ಚಿಕ್ಕೋಡಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು  ಆರಂಭಿಸಿತು. ಈ ಮಹಾವಿದ್ಯಾಲಯವು ನವದೆಹಲಿಯ ಅಖಿಲ ಭಾರತದ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಸಂಲಗ್ನತೆ ಹೊಂದಿದ್ದು,  ಈ ಮಹಾವಿದ್ಯಾಲಯದಲ್ಲಿ ಸಿವ್ಹಿಲ್ ಇಂಜನೀಯರಿಂಗ್, ಮೆಕ್ಯಾನಿಕಲ್ ಇಂಜನೀಯರಿಂಗ್, ಇಲೇಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ್ ಎಂಬ ನಾಲ್ಕು ವಿಭಾಗಗಳಿದ್ದು, ಮಹಾವಿದ್ಯಾಲಯದಲ್ಲಿ ಕರ್ನಾಟಕ, ಮಹಾರಾಷ್ತ್ರ, ಜಾರ್ಖಂಡ, ಉತ್ತರಪ್ರದೇಶ, ಬಿಹಾರ, ಗೋವಾ ಮತ್ತು ಗುಜರಾತ ರಾಜ್ಯಗಳು ಸೇರಿದಂತೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಾದರಿ ಇಂಜೀನಿಯರಿಂಗ್ ಕಾಲೇಜು ಪ್ರಶಸ್ತಿ: ಶಿಸ್ತುಬದ್ದ ಹಾಗೂ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಈ ಮಹಾವಿದ್ಯಾಲಯಕ್ಕೆ ಗ್ರಾಮೀಣ ಭಾಗದ ಮಾದರಿ ಇಂಜೀನಿಯರಿಂಗ್ ಕಾಲೇಜು ಎಂಬ ಪ್ರಶಸ್ತಿಯನ್ನು ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನ್ನ 20ನೇಯ ಸಂಸ್ಥಾಪಣಾ ದಿನಾಚರಣೆಯಂದು ನೀಡಿ ಗೌರವಿಸಿದೆ. ಹಾಗೂ ಐಎಸ್‍ಒ 9001 ಸಹ ಇದನ್ನು ಪ್ರಮಾಣಿಕರಿಸಿದ್ದು, 2015 ರಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದೆ.

ಅತ್ಯಾಧುನಿಕ ಸೌಕರ್ಯ: ಈ ಮಹಾವಿದ್ಯಾಲಯವು ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಹೊಂದಿದ್ದು, ಸುಸಜ್ಜಿತವಾದ ಬೃಹದಾಕಾರದ ಕಟ್ಟಡಗಳು, ಅತ್ಯಾಧುನಿಕ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ವೈಪೈ ಕ್ಯಾಂಪಸ್, ಕೆಫೆಟೆರಿಯಾ, ವಿಶಾಲವಾದ ಆಟದ ಮೈದಾನ, ಗುರುವ್ರಕ್ಷ ಇಂಟ್ರಾನೆಟ್ ಸೌಕರ್ಯ, ಆರ್.ಓ. ವಾಟರ್ ಸೌಲಭ್ಯ, ಮುವಿ ಕ್ಲಬ್, ಲೇಡಿಸ್ ಕ್ಲಬ್, ಯೋಗ ತರಬೇತಿ, ಕೆ.ಎಲ್.ಇ. ಹೆಲ್ತ್ ಕಾರ್ಡ್, ಅತ್ಯಾಧುನಿಕ ವ್ಯಾಯಾಮ ಶಾಲೆ ಸೇರಿದಂತೆ ಒಟ್ಟಾರೆಯಾಗಿ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ.


ಶಿಕ್ಷಕರ ಸಂಶೋಧನೆ ಮತ್ತು ಸಾಧನೆ: ಈ ಮಹಾವಿದ್ಯಾಲಯದಲ್ಲಿ ನುರಿತ ಉಪನ್ಯಾಸಕರಿದ್ದು, ಉತ್ತಮ ಭೋದಕರು ಸೇವೆ ಸಲ್ಲಿಸುತ್ತಿದ್ದಾರೆ. ಮಹಾವಿದ್ಯಾಲಯದ ಬೋಧಕ ವರ್ಗ ಬೋಧನೆಯ ಜೊತೆಗೆ ಸಂಶೋಧನೆಯಲ್ಲಿ ತೋಡಗಿಸಿಕೊಂಡಿದ್ದಾರೆ. ಕಾಲೇಜಿನ 10ಕ್ಕೂಹೆಚ್ಚು ಪ್ರಾಧ್ಯಾಪಕರು ತಮ್ಮ ಪಿಎಚ್‍ಡಿ ಪದವಿ ಪಡೆದುಕೊಂಡಿದ್ದು, 40ಕ್ಕೂ ಹೆಚ್ಚು ಜನ ಪ್ರಾಧ್ಯಾಪಕರು ಸಂಶೋಧನೆಯಲ್ಲಿ ಕಾಯೋನ್ಮೂಖರಾಗಿದ್ದು ನೂರಾರು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಾಂತ್ರಿಕ ಜರ್ನಲ್‍ಗಳಲ್ಲಿ ಪ್ರಕಟಿಸಿದ್ದಾರೆ. ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲದಿಂದ ಚಿಕ್ಕೋಡಿ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನೀಕಲ್, ರಸಾಯನ ಶಾಸ್ತ್ರ, ಭೌತಶಾಸ್ತ್ರ ವಿಭಾಗಗಳು ಸಂಶೋಧನಾ ಕೇಂದ್ರಗಳೆಂದು ಎಂದು ಮಾನ್ಯತೆ ಪಡೆದುಕೊಂಡಿದ್ದು, ಈ ಕಾಲೇಜಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಬೇರೆ ಬೇರೆ ಎಂಜನಿಯರಿಂಗ್ ಕಾಲೇಜುಗಳ 15 ಜನ ಉಪನ್ಯಾಸಕರು ಪಿಎಚ್‍ಡಿ ಅಧ್ಯಯನ ಮಾಡುತ್ತಿರುವುದು ಈ ಕಾಲೇಜಿನ ಮತ್ತೊಂದು ವಿಶೇಷ.


ಪ್ಲೆಸಮೆಂಟ ಸೆಲ್ ಕಳೆದ ಬಾರಿ 113 ವಿದ್ಯಾರ್ಥಿಗಳು ಸೆಲೆಕ್ಟ : ವಿದ್ಯಾರ್ಥಿಗಳ ಸವಾರ್ಂಗೀಣ ಪ್ರಗತಿಯನ್ನು ಗುರುತಿಸಿ ಅವರಲ್ಲಿ ಉತ್ತಮ ವ್ಯಕ್ತಿತ್ವ, ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಸಂದರ್ಶನ ಕಲೆಯನ್ನು ಕರಗತಗೊಳಿಸಲು ಲ್ಯಾಂಗ್ವೇಜ್ ಲ್ಯಾಬ ಹಾಗೂ ಆಕ್ಟಿವಿಟಿ ರೂಮ್ ಸ್ಥಾಪಿಸಲಾಗಿದೆ. ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ದೇಶದ ವಿವಿಧ ಕಂಪನಿಗಳ ತಜ್ಞರಿಂದ ಕಾರ್ಯಾಗಾರ ಹಾಗೂ ತರಬೇತಿಯನ್ನು ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಸಂವಹನ ಬೆಂಗಳೂರಿನ ರ್ಯಾರೋ, ಡೇರ್ ಟೂ ಡ್ರೀಮ್, ಓರ್ಯಾಕಲ್ ಯುನಿವರ್ಸಿಟಿ, ಓಲೀವ್ ಬೋರ್ಡ ತರಬೇತಿ ಸಂಸ್ಥೆಗಳು ಹಾಗೂ ಹಲವಾರು ತಜ್ಞರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತರಬೇತಿಯನ್ನು ನೀಡುತಿದ್ದಾರೆ. ಇದರ ಫಲವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ 113 ವಿದ್ಯಾರ್ಥಿಗಳು ಕ್ಯಾಂಪಸ ಸಂದರ್ಶನದಲ್ಲಿ ಆಯ್ಕೆಯಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಇನಫೋಸಿಸ್, ವಿಪ್ರೊ, ಪರಸಿಸ್ಟಂಟ್ ಸಿಸ್ಟಮ್, ಕಾಗ್ನಿಜೆಂಟ್, ಒರ್ಯಾಕಲ್, ಎಚ್.ಪಿ., ರಾಬರ್ಟ್ ಬಾಶ್, ಅಲ್ಫಾ ನೈನ್ ಮರೈನ, ಗ್ಲೊಬಲ ಎಡ್ಜ, ರೊಬೊಸಾಫ್ಟ, ಶ್ರೀರಾಮ್ ಗ್ರುಪ್ ಮುಂತಾದ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ರಾಷ್ಟ್ರಮಟ್ಟದ ತಾಂತ್ರಿಕ ಸಮ್ಮೇಳನ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಅರಿವು ವಿದ್ಯಾರ್ಥಿಗಳ ಕೌಶಲ ಹಾಗೂ ಜ್ಞಾನ ವಿನಿಮಯವಾಗುವ ಸದುದ್ದೇಶದಿಂದ ಪ್ರತಿ ವರ್ಷವೂ ಮಹಾವಿದ್ಯಾಲಯದಲ್ಲಿ 2 ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಮಟ್ಟದ ತಾಂತ್ರಿಕ ಕಾರ್ಯಾಗಾರ, ಪ್ರೋಜೆಕ್ಟ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.


ಐಐಟಿಗಳ ಜೊತೆಗೆ ಸಹಭಾಗಿತ್ವ: ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ತಾಂತ್ರಿಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಐಐಟಿ, ಮುಂಬಯಿ ಹಾಗೂ ಐಐಟಿ, ಖರಗಪುರ ಸಹಭಾಗಿತ್ವದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾನವಸಂಪನ್ಮೂಲ ಇಲಾಖೆ ವತಿಯಿಂದ ಕಾಲೇಜಿನಲ್ಲಿ ವಿವಿಧ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ರೋಬೋಟಿಕ್ಸ್ ಜ್ಞಾನ ಹೆಚ್ಚಿಸುವ ಸಲುವಾಗಿ ಐಐಟಿ, ಮುಂಬಯಿಯ ಈ ಯಂತ್ರ ತಂಡದ ಸಹಭಾಗಿತ್ವದೊಂದಿಗೆ ಕಾಲೇಜಿನಲ್ಲಿ ರೋಬೋಟಿಕ್ಸ್ ಪ್ರಯೋಗಾಲಯ ಸ್ಥಾಪಿಸಲಾಗಿದೆ.


ಪರಿಸರ ಸ್ನೇಹಿ ಕ್ಯಾಂಪಸ್: ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜು 19 ಎಕರೆ ವಿಶಾಲವಾದ ಮತ್ತು ರಮಣೀಯವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಕಾಲೇಜಿನ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಬಿಸಿಲಿನಿಂದ ಬಳಲಿ ಬಂದವರಿಗೆ ಹಸಿರಿನಿಂದ ಕಂಗೋಳಿಸುವ ಉದ್ಯಾನ ತಂಪಿನ ಸಿಂಚನವನ್ನುಂಟು ಮಾಡುವುದಲ್ಲದೇ, ಪ್ರಸಕ್ತ ಕಡು ಬರಗಾಲದಲ್ಲಿ ಬಾಯಾರಿ ಬರುವ ಪಕ್ಷಿ ಸಂಕುಲಗಳ ದಾಹವನ್ನು ನೀರು ದಾನಿಗಳು ನೀಗಿಸುತ್ತಿದೆ. ಕಾಲೇಜಿನ ಆವರಣದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ತ್ಯಾಜ್ಯ ವಸ್ತು ಸಂಸ್ಕರಣಾ ಘಟಕವೂ ಇದೆ. ಕಾಲೇಜಿನ ಆವರಣದಲ್ಲಿನ ಬಳಕೆ ಆದ ನೀರನ್ನು ಶುದ್ಧಿಕರಿಸಿ ಉದ್ಯಾನದಲ್ಲಿನ ಗಿಡಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.


ವಸತಿ ನಿಲಯಗಳು: ಈ ಮಹಾವಿದ್ಯಾಲಯವು 900 ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಂಗುವ ಸಾಮಥ್ರ್ಯವುಳ್ಳ ಪ್ರತ್ಯೇಕವಾದ ಸುಸಜ್ಜಿತವಾದ ವಸತಿ ನಿಲಯಗಳನ್ನು ಹೊಂದಿದೆ. ಈ ವಸತಿ ನಿಲಯಗಳಲ್ಲಿ ಅತ್ಯಾಧುನಿಕ ಜೀಮ್, ವೈ ಫೈ, ಸೂಪರ ಮಾರ್ಕೇಟ್, ಸ್ಟೆಷನರಿ ಮಳಿಗೆ ವ್ಯವಸ್ಥೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿನಿಯರ ವಸತಿ ನಿಲಯವು ಬ್ಯೂಟಿ ಪಾರ್ಲರ್ ಸಹ ಹೊಂದಿದೆ. ಚಿಕ್ಕೋಡಿ ಬಸ್ ನಿಲ್ದಾಣದಿಂದ ಮಹಾವಿದ್ಯಾಲಯದವರಿಗೆ ಸತತ ಕಾಲೇಜಿನ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.


ಪಠ್ಯೇತರ  ಚಟುವಟಿಕೆಗಳು: ಈ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸೌಕರ್ಯವನ್ನು ಒದಗಿಸಲಾಗಿದೆ. ಕಾಲೇಜಿನ ಕ್ರೀಡಾ ಮೈದಾನವು ಕ್ರಿಕೇಟ್, ಓಟದ ಟ್ರ್ಯಾಕ್, ಬಾಲ್ ಬ್ಯಾಡಮಿಂಟನ್, ಕಬ್ಬಡಿ, ವ್ಹಾಲಿಬಾಲ್, ನೇಟ್‍ಬಾಲ್, ಫುಟ್ ಬಾಲ್ ಮುಂತಾದ ಹೊರಾಂಗೀಣ/ಒಳಾಂಗೀಣ ಕ್ರೀಡಾ ಸೌಲಭ್ಯ ಒಳಗೊಂಡಿದ್ದು, ಇಲ್ಲಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ನೇಟ್‍ಬಾಲ್, ಮಲ್ಲಕಂಬ, ಕಬಡ್ಡಿ ಹಾಗೂ ಫುಟ್‍ಬಾಲ್ ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಸಾಧನೆ ಮಾಡುತ್ತಿದ್ದು ಈ ವರ್ಷ ಕಾಲೇಜಿನ ಮೂರು ವಿದ್ಯಾರ್ಥಿಗಳು

ಯೂನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಯಾಗಿದ್ದಾರೆ.

ಹಗಲಿರುಳು ಕ್ರೀಯಾಶೀಲ ಮತ್ತು ಗುಣಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿ ಅದರಲ್ಲಿ ಸೈ ಎನಿಸಿಕೊಳ್ಳುತ್ತಿರುವ ಕೆಎಲ್‍ಇ ಸಂಸ್ಥೆ, ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಹಾಗೂ ಎಲ್ಲ ಆಡಳಿತ ಮಂಡಳಿಯ ನಿರ್ದೇಶಕರ ಬೆಂಬಲದಿಂದ ಮಹಾವಿದ್ಯಾಲಯದ ಪ್ರಾಚಾರ್ಯರ ಸತತ ಪ್ರಯತ್ನದಿಂದ ಇಂದು ಚಿಕ್ಕೋಡಿ ಪಟ್ಟಣದಲ್ಲಿ ತಾಂತ್ರಿಕ ಮಹಾವಿದ್ಯಾಲಯವು ಹೆಮ್ಮರವಾಗಿ ಬೆಳೆದು ಗಡಿ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿರುವ ಕಾರ್ಯ ಅವಿಸ್ಮರಣಿಯ.....


ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಡಿ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಉನ್ನತ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಲಾಗಿರುವ ನಮ್ಮ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪರಿಕ್ಷಾ ಫಲಿತಾಂಶದಲ್ಲಿ ನಮ್ಮ ಭಾಗದಲ್ಲಿಯೇ ಮುಂಚೂಣಿಯಲ್ಲಿದ್ದು, ನೂರಾರು ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದುನಮಗೆ ಹೆಮ್ಮೆಯ ವಿಷಯವಾಗಿದೆ.-- ಪ್ರಾಚಾರ್ಯ ಡಾ ಪ್ರಸಾದ ರಾಂಪೂರೆ KLECET, ಚಿಕ್ಕೋಡಿ


ಕಾಲೇಜಿನಲ್ಲಿ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.


" ಇಂಜನೀಯರಿಂಗ್ ಕ್ಷೇತ್ರದಲ್ಲಿ ಪ್ರಯಾಣ ಇತರರಿಗಿಂತ ಭಿನ್ನವಾಗಿತ್ತು, ಏನಾದರೂ ಸಾಧಿಸಬೇಕು ಎಂದು ಪ್ರವೇಶ ಪಡೆದೆ. ನನಗೆ ನಮ್ಮ ಪ್ರಾಧ್ಯಾಪಕರು ಪರೀಕ್ಷೆಯಲ್ಲಿ ಸ್ಕೋರ್ ಮಾಡುವುದು ದೊಡ್ಡದಲ್ಲ, ಸ್ಪಷ್ಟ ಪರಿಕಲ್ಪನೆ ತಿಳಿದುಕೋಳ್ಳಬೇಕುಎಂದು ಹೇಳುತ್ತಿದ್ದರು. ಆ ಮಾತು ನನಗೆ ತುಂಬಾ ಅನುಕೂಲಕರವಾಗಿದೆ. ಕಾಲೇಜಿಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ--"

 *ಪವನ ಹಂಜೆ,

ಬ್ರಾಡ್‍ಕ್ಯಾಸ್ಟ್ ಇಂಜನೀಯರ್ ಬೇಹ್ರೇನ್* 


"ನಾನು ಕಾಲೇಜಿಗೆ ಪ್ರವೇಶ ಪಡೆದಾಗಿನ ಸಮಯಕ್ಕಿಂತ ಈಗ ಸಾಕಷ್ಟು ಸೌಲಭ್ಯಗಳಿವೆ. 2010ರಿಂದ ನಾನು ಸೇರಿದ್ದೇನೆ, ಇಲ್ಲಿನ ಹಸಿರು ವಾತಾವರಣ ಒದಲು ಹುಮ್ಮಸ್ಸು ನೀಡುತ್ತದೆ. ಗುಣಮಟ್ಟದ ಶಿಕ್ಷಣದೊಂದಿಗೆ ಆಟೋಟ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯು ಇದೆ. ಇಲ್ಲಿನ ನೆನಪುಗಳನ್ನು ಮರೆಯಲಾಗದು."

* ಧನಂಜಯ ದೇಸಾಯಿ 

ಐಒಟಿ ಇಂಜನೀಯರ್, ಜಪಾನ


ಹೆಚ್ಚಿನ ವಿವರಗಳಿಗೆ ಈ ಲಿಂಕ್ ವೀಕ್ಷಿಸಿ:

http://klecet.edu.in/

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು