ನಾವು ಚಿಕ್ಕವರಿದ್ದಾಗ ಅಪ್ಪ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ

ಒಟ್ಟು ವೀಕ್ಷಣೆಗಳು : 322
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ತನ್ನಷ್ಟಕ್ಕೆ ತಾನೇ ತನ್ನ ಎಲ್ಲ ನೋವುಗಳನ್ನು ನುಂಗಿ ಮಕ್ಕಳ ಮುಂದೆ ಸದಾ ಮಂದಹಾಸದಿಂದ ಇರುವ ನಗೆಗಾರ ಅಪ್ಪ. ನಾವು ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾಗ ಸಿಟ್ಟಿನಿಂದ ಬುದ್ದಿ ಹೇಳುವ ಅಪ್ಪ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ಕಿದೆ.

ಮಲ್ಲಿಕಾರ್ಜುನ ಬಿ.ಕೆ/ವಿನಯ ಮಠಪತಿ

ಅಪ್ಪ-ಅವ್ವ ಒಂದು ನಾಣ್ಯದ ಎರಡು ಮುಖ. ಅಪ್ಪ ಎಂದಾಕ್ಷಣ ಮನದಲ್ಲಿ ಮೂಡುವ ಮೊದಲ ಪದವೆ ತಾಳ್ಮೆ. ಸಮಸ್ಯೆಗಳನ್ನು ತನ್ನೊಳಗೆ ತಾನು ಅವಿತುಕೊಂಡು ಮಕ್ಕಳಿಗೆ ನವ ಸಂತಸ, ಚೈತನ್ಯ ತುಂಬುವ ಶಕ್ತಿ ಎಂದರೆ ಅಪ್ಪ. ಆ ಅಪ್ಪನ ಕಿರು ಬೆರಳು ಹಿಡಿದು ಅಂಬೆಗಾಲು ಉರುತ್ತಾ ತೊದಲುವ ಮಾತುಗಳಿಂದ ಅ...ಪ್ಪಾ.. ಅನ್ನುವ ವಾಕ್ಯದ ಜೆಂಕಾರ. ನಾವು ಚಿಕ್ಕವರಿದ್ದಾಗ ಪ್ರೀತಿಯಿಂದ ಬಿಗಿದಪ್ಪಿಕೊಂಡಾಗ ಅಪ್ಪನಿಗಾಗುವ ಖುಷಿ ಅಷ್ಟಿಸ್ಟಿಲ್ಲ. ತಿಳಿಯದ ವಯಸ್ಸಿನಲ್ಲಿ ಅಪ್ಪನ ಹೆಗಲ ಮೇಲೇರಿ ಓಡಾಡುವ ಸಂತೋಷ ಈಗ ಎಂತಾ Audi, Benz, BMW ಕಾರಲ್ಲಿ ತಿರುಗಡಿದರು ಆ ಸಂತೋಷ ಸಿಗೊಲ್ಲ. ಅಪ್ಪ ಮಕ್ಕಳ ಬೆಳವಣಿಗೆಯ ಆಶಾಕಿರಣ, ಉತ್ತಮ ಮಾರ್ಗದರ್ಶಕ. ಮಕ್ಕಳು ಏನಾದರೂ ಸಾದಿಸಿದಗ ಹೋಗಳಿ, ತಪ್ಪು ಮಾಡಿದಾಗ ಗದರಿಸುವ ಅಪ್ಪನ ಬಗ್ಗೆ ವರ್ಣಿಸಲು ಪದಗಳು ಸಾಲೊಲ್ಲ. ಏನೇ ಸಂಕಷ್ಟಗಳು ಬಂದರು ತನ್ನ ಸಂತೋಷ ಬದಿಗಿಟ್ಟು ಮಕ್ಕಳ ನಲಿವಿನಲ್ಲಿ ತನ್ನ ಗೆಲುವನ್ನು ಕಾಣುವ ಅಪ್ಪ. ಮಕ್ಕಳ ಏಳ್ಗೆಗಾಗಿ ಸದಾಕಾಲ ತನ್ನ ಜೀವನವನ್ನು ಮುಡುಪಿಡುವ ಶ್ರಮಜೀವಿ. ಮಕ್ಕಳ ಬಗ್ಗೆ ತನ್ನ ಮನದಲ್ಲೆ ಕನಸಿನ ಮನೆ ಮಾಡಿ ಆ ಕನಸುಗಳನ್ನು ನನಸು ಮಾಡಲು ಜೀವನ ಪರ್ಯಂತ ಹೋರಾಡುವ ಹೋರಾಟಗಾರ. ತನ್ನಗಾಗಿ ಒಂದು ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಅಪ್ಪ ಮಕ್ಕಳು ಕೈ ಮಾಡಿ ತೋರಿಸಿದ್ದನ್ನು ಸಾಲ ಮಾಡಿಯಾದರು ಕೊಡಿಸುವ  ಮಹಾನಜೀವಿ. ಮಗ/ಳು ಒಳ್ಳೆಯ ಆಚಾರ ವಿಚಾರ ಗುಣಾತ್ಮಕ ಬೆಳವಣಿಗೆಯ ಜೊತೆಗೆ ಸಮಾಜದಲ್ಲಿ ಗೌರವಾನ್ವಿತವಾಗಿ ಬಾಳಲೆಂದು ನಂಬಿದ ದೇವರಲ್ಲಿ ಬೇಡಿಕೊಳ್ಳುವ ಆಶಾಜೀವಿ. ಜೀವನವಿಡಿ ತನ್ನ ಮಕ್ಕಳಿಗೊಸ್ಕರ ಬದುಕನ್ನು ಸವಿಸುತ್ತಾ ನಾಳಿನ ದಿನಕ್ಕಾಗೆ ಹಗಲಿರುಳು ಶ್ರಮಿಸುವ ಅಪ್ಪ ಮಕ್ಕಳ ಬದುಕಿಗೆ ದಾರಿ ದೀಪ. ತನ್ನಷ್ಟಕ್ಕೆ ತಾನೇ ತನ್ನ ಎಲ್ಲ ನೋವುಗಳನ್ನು ನುಂಗಿ ಮಕ್ಕಳ ಮುಂದೆ ಸದಾ ಮಂದಹಾಸದಿಂದ ಇರುವ ನಗೆಗಾರ ಅಪ್ಪ. ನಾವು ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾಗ ಸಿಟ್ಟಿನಿಂದ ಬುದ್ದಿ ಹೇಳುವ ಅಪ್ಪ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ಕಿದೆ. ಆದರೆ ಇನ್ನೊಂದು ವಿಷಾದನೀಯ ಸಂಗತಿಯೆಂದರೆ ಮಕ್ಕಳು ತಮ್ಮ ವಿಲಾಸಿ ಬದುಕಿಗಾಗಿ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ದೊಡ್ಡ ದುರಂತ. ಜೀವ ಇರುವ ತನಕ ತಂದೆ-ತಾಯಿ ಪ್ರೀತಿಗೆ ಋಣ ತೀರಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ. ಮಕ್ಕಳಾದವರು ಸದಾ ಕಾಲ, ಅವರ ಕೊನೆ ಉಸಿರು ಇರುವತನಕ ಅವರನ್ನು ಖುಷಿಯಿಂದ ಇಡೋಣ. ಇಂದು ನಾವು ಸಾವಿರ, ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು ಅಂದು ಅಪ್ಪ ತರುತ್ತಿದ್ದ ಆ ನೂರು ರೂಪಾಯಿಯ ಸಂತೋಷ ಮರೆಯ ಬೇಡಿ. ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು