ಮಳೆಗಾಲ ಎಂಜಾಯ್ ಮಾಡಬೇಕೆ ? ಹಾಗಾದ್ರೆ ಬನ್ರಿ ಒಂದ್ಸಾರಿ ಅಂಬೋಲಿಯ ಅಂಬರದಾರೆಗೆ..

ಒಟ್ಟು ವೀಕ್ಷಣೆಗಳು : 659
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮಲ್ಲಿಕಾರ್ಜುನ ಬಿ. ಕರೆರುದ್ರನ್ನವರ
ಬೆಳಗಾವಿ.


ಚಿಟ ಪಟ ಹನಿಗಳ ಜಿಟಿ ಜಿಟಿ ಮಳೆಯ ಸದ್ದಿನಲ್ಲಿ ಪ್ರವಾಸಿಗರು ಹೆಚ್ಚಾಗಿ ಫಾಲ್ಸ್ ಗಳತ್ತ ಮುಖ ಮಾಡೋದು ಹೆಚ್ಚು. ಹಚ್ಚ ಹಸಿರು ಬೆಟ್ಟಗಳನ್ನು ನೋಡಲು, ಮಳೆಗಾಲದ ಮಜಾ ಸವಿಯಲು ಅನೇಕರು ಹಾತೊರೆಯುತ್ತಾರೆ. ಆದರೆ ಎಲ್ಲಿ ಹೋಗೋದು ? ಯಾವ ಸ್ಥಳ ಬೆಸ್ಟ್ ಎಂಬ ಗೊಂದಲ ಅನೇಕರನ್ನು ಕಾಡೋದು ಪಕ್ಕಾ. 

ಆದರೆ ಇಲ್ಲೊಂದು ಸ್ಥಳವಿದೆ ಅದು ಪ್ರವಾಸಿಗರ ಸ್ವರ್ಗ ಅಂತಲೂ ಹೇಳಬಹುದು ಪ್ರೇಮಿಗಳಿಗೆ, ಪ್ರೆಂಡ್ಸ್, ಪ್ಯಾಮಿಲಿ ಟ್ರಿಪ್ ಗೆ ಹೇಳಿ ಮಾಡಿಸಿದ ಸ್ಪಾಟ್. 

ಜಿಟಿ ಜಿಟಿ ಮಳೆಯಲ್ಲಿ ಒದ್ದೆ ಮೈ ಜೊತೆಗೆ ಸುತ್ತಲೂ ಹಸಿರು ಗುಡ್ಡ, ಇಲ್ಲಿನ ಸುಟ್ಟಿರುವ, ಮತ್ತು ಹಸಿಯಾದ ಗೋಂಜಾಳ ತೆನೆ (ಮೆಕ್ಕೆಜೋಳ) ಬಡಂಗ, ಭಜ್ಜಿ, ವಡಾಪಾವ, ಟೀ ಸೆಂಟರ್ ಗಳಿಗೆ ಪುಲ್ ಡಿಮ್ಯಾಂಡ್. ಯಾರಾದ್ರೂ ಸರಿ ಇಲ್ಲಾ ಬೇಡ್ರಿ ನಮಗೆ ಅಂದ್ರೆ ಅಷ್ಟೇ ಅವರ ಹೊಟ್ಟೆಗೆ ತಣ್ಣೀರು ಬಟ್ಟೆ ಅಂತೂ ಪಿಕ್ಸ್...

ಅಷ್ಟಕ್ಕೂ ಅದೆಲ್ಲಾ ಫೀಲ್ ಆಗೋದು ಎಲ್ಲಿ ಅಂತೀರಾ ?
ಬೆಳಗಾವಿಗೆ ಸಮೀಪವಿರುವ ಅಂಬೋಲಿ ಪಾಲ್ಸ್ ಹತ್ತಿರ. ಮಳೆಗಾಲ ಬಂತೆಂದರೆ ಸಾಕು ಪ್ರವಾಸಿಗರ ದಂಡೆ ಇತ್ತ ಬರುತ್ತದೆ. ಪ್ರವಾಸಿಗರ ಮನಸ್ಸಿಗೆ ಸಖತ್ ಎಂಜಾಯ್ ಮೆಂಟ್ ಸಿಗೋದಂತರು ಪಕ್ಕಾ.

ಎಲ್ಲಿದೆ ಈ ಅಂಬೋಲಿ ಫಾಲ್ಸ್ ? 
ಬೆಳಗಾವಿಯ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿದೆ ಈ ಅಂಬೋಲಿ. ಇದು ಮಹಾರಾಷ್ಟ್ರ ರಾಜ್ಯದ ಸಿಂದದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನಲ್ಲಿ ಅಂಬೋಲಿ ಎಂಬ ಗ್ರಾಮದಲ್ಲಿ ಇರುವುದರಿಂದ ಈ ಫಾಲ್ಸ್ ಗೆ ಅಂಬೋಲಿ ಫಾಲ್ಸ್ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಇದು ಹಸಿರು ಪರ್ವತ, ಫಲವತ್ತಾದ ಪ್ರದೇಶದ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವುದರಿಂದ ಪ್ರೇಮಿಗಳಿಗೆ ಹಾಗೂ ಲಕ್ಷಾಂತರ ಪ್ರವಾಸಿಗರ ಪಾಲಿಗೆ ಹಾಟ್​ ಸ್ಪಾಟ್​.

ಹಾಗಾದ್ರೆ ಈ ಮೋಹಕ ಚೆಲುವಿನ ಅಂಬೋಲಿ ಫಾಲ್ಸ್ ಗೆ ಹೇಗೆ ಹೋಗುವುದು ? 
ಈ ಅಂಬೋಲಿ ಫಾಲ್ಸ್ ಗೆ ಹೋಗಬೇಕೆಂದ್ರೆ ರಸ್ತೆ ಮೂಲಕವೇ ಹೋಗಬೇಕು. ಬೆಳಗಾವಿಯಿಂದ ಸುಮಾರು 68 ಕಿಲೋಮೀಟರ್ ಅಂತರದಲ್ಲಿ ಈ ಫಾಲ್ಸ್ ಇದೆ. ಹೆಚ್ಚು ಕಡಿಮೆ ಒಂದೂವರೆ, ಎರಡು ತಾಸಿನ ಪ್ರಯಾಣ ಅಷ್ಟೇ. ಬೆಳಗಾವಿಯಿಂದ ಸಾರಿಗೆ ಬಸ್ ಗಳ ವ್ಯವಸ್ಥೆ ಇದೆ ಜೊತೆಗೆ ಗೋವಾ ಮೂಲಕ್ ಸಾವಂತವಾಡಿಯಲ್ಲಿ ರೈಲ್ವೆ ನಿಲ್ದಾಣವಿದೆ. ಅಲ್ಲಿಂದ ರಿಕ್ಷಾ ಅಥವಾ ಟ್ಯಾಕ್ಸಿ ಬಳಸಬಹುದು. ಕಾಲೇಜು ಯುವಕ, ಯುವತಿಯರು ಹೆಚ್ಚಾಗಿ ತಮ್ಮ ಬೈಕ್, ಹಾಗೂ ಕಾರಗಳ ಜೊತೆಗೆ ಹೆಚ್ಚಾಗಿ ಹೋಗುವುದು ರೂಡಿ. ಅಂಬೋಲಿ ಘಟ್ಟದ ದಾರಿಯುದ್ದಕ್ಕೂ ಚಿಕ್ಕ ಪುಟ್ಟ ಸುಂದರ ಜಲಪಾತಗಳು, ಸನ್ ರೈಸ್, ಸನ್ ಸೆಟ್ ವ್ಯೂವ್ ಪಾಯಿಂಟ್ ಗಳು ಕಾಣ ಸಿಗುತ್ತವೆ.

ಪ್ರವಾಸಿಗರಿಂದ ಗ್ರೀನ್ ವ್ಯಾಲಿ ಅಂತಾ ಕರೆಸಿಕೊಳ್ಳುತ್ತಿರುವ ಅಂಬೋಲಿಯ ವಿಶೇಷತೆ ಆದ್ರು ಏನು ? 
ಪ್ರವಾಸಿಗರ ಸ್ವರ್ಗ ಅಂಬೋಲಿಯ ವಿಶೇಷತೆ ಅಂದ್ರೆ ಇದು ಅತ್ಯಂತ ಸುಂದರ ಹಾಗೂ ನಯನ ಮನೋಹರವಾಗಿದೆ. ಇಲ್ಲಿಯ ಬಿಳುಪಿನ ಜಲಧಾರೆಯನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ಹೆಚ್ಚಾಗಿ ಇದು ರಸ್ತೆಗೆ ಆಂಟಿ ಕೊಂಡಿದೆ. ಸುರಕ್ಷಿತ ಹಾಗೂ ಪ್ರಶಾಂತ ಜಲಪಾತವಾಗಿದೆ. ಹಲವು ಫಾಲ್ಸ್ ಗಳು ಹತ್ತಿರದಿಂದ ನೋಡಲು ಆಗುವುದಿಲ್ಲ. ಆದರೆ ಅಂಬೋಲಿ ಫಾಲ್ಸ್ ಮಾತ್ರ ಇದ್ದಕ್ಕೆ ವಿರುದ್ಧವಾಗಿದೆ ಹತ್ತಿರದಿಂದ ನೋಡಬಹುದು, ಕುಳಿತು ಮಜಾ ಮಾಡಬಹುದು. ಎತ್ತರದಿಂದ ಬೀಳುವ ಫಾಲ್ಸ್ ನೀರಿಗೆ ಬೆನ್ನೋಡಿ ನಿಂತರೆ ಮೈ, ಮನ ಮರೆತು ಧನ್ಯತಾ ಭಾವ ಮನದಲ್ಲಿ ಮೂಡುತ್ತದೆ.

ಅಷ್ಟಕ್ಕೂ ಅಂಬೋಲಿಗೆ ಯಾವಾಗ ಹೋಗಬೇಕು? 
ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಅಂಬೋಲಿಗೆ ಮಳೆಗಾಲದಲ್ಲಿಯೇ ಹೋಗಬೇಕು. ಇಲ್ಲಿರುವ ಕಾಂಕ್ರೀಟಿನ ಮೆಟ್ಟಿಲುಗಳ ಮೂಲಕ ಮಳೆಯಿಂದ ಧುಮ್ಮಿಕ್ಕುವ ಜಲಧಾರೆ. ಮಳೆಗಾಲದಲ್ಲಿ ಅಂಬೋಲಿಯ ಜಲಪಾತ ದ್ವಿಗುಣವಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಜೂನ್ ದಿಂದ ಆಕ್ಟೊಬರ್ ವರೆಗೆ ಅಂಬೋಲಿ ಫಾಲ್ಸ್ ಮೈದುಂಬಿಕೊಂಡು ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಒಂದೆಡೆ ಬಿಡದೆ ಸುರಿಯುವ ಮಳೆ, ಮತ್ತೊಂದೆಡೆ ಹಚ್ಚ ಹಸಿರು ಸೌಂದರ್ಯ, ಆಗಾಗ ಮಂಜು ಕವಿಯುವ ವಾತಾವರಣ. ಇದೆಲ್ಲವೂ ನೋಡಸಿಗುವುದು ಅಂಬೋಲಿಯಲ್ಲಿ.

ಈ ಅಂಬೋಲಿ ಒಂದು ಅತ್ಯಂತ ಆಕರ್ಷಿಣಿಯ ಸ್ಥಳಗಳಲ್ಲಿ ಒಂದು.  ಮಳೆಗಾಲದಲ್ಲಿ ಅಪ್ರತಿಮ ಚೆಲುವೆ ಅಂಬೋಲಿಯ ಸೌಂದರ್ಯ ವರ್ಣನೆಗೆ ನಿಲುಕುದ್ದು. ಹಾಲಿನ ಹೊಳೆಯಂತೆ ಧುಮ್ಮಿಕ್ಕುವ ನೀರು, ಮೋಡ ಕವಿದ ವಾತಾವರಣ. ದಿನವಿಡಿ ದಟ್ಟ ಇಬ್ಬನಿ ಕವಿದು ಕೊಂಡಿರುವ ಈ ತಾಣ, ಬೆಟ್ಟ, ಗುಡ್ಡ ಹಸಿರು ಕಾನನದ ನಡುವೆ ಮೈಗೆ ಮುತ್ತಿಕ್ಕುವ ಮೋಡ, ಸೂರ್ಯನ ರಶ್ಮಿಗಳು ಮೋಡದ ಮಂಜನ್ನು ಭೇಧಿಸಿ ಬರುವ ದೃಶ್ಯ, ನೀರಿನ ಸಿಂಚನ, ಅವಿಸ್ಮರಣೀಯ ಹಾಗೂ ರೋಮಾಂಚನೀಯ ಆನಂದ, ಪ್ರೇಮಿಗಳಿಗಂತು ಹೇಳಿ ಮಾಡಿಸಿದ ಜಾಗ. ಇಲ್ಲಿಯ ಸೊಬಗಿಗೆ ಎಂತವರು ಬಂದರೆ ಮೈ ಮರೆಯುತ್ತಾರೆ, ಕುಣಿದು ಕುಪ್ಪಳ್ಳಿಸುತ್ತಾರೆ, ಮೋಜು ಮಸ್ತಿ ಮಾಡುತ್ತಾರೆ. ಈ ಭೂಲೋಕದ ಸುಂದರಿಯನ್ನು ಸವಿಯಲು ವೀಕೆಂಡ್ ಬೆಸ್ಟ್ ಟೈಮ್. ನೀವು ಪ್ರೆಂಡ್ಸ್, ಪ್ಯಾಮಿಲಿ ಜೊತೆ ಬನ್ರಿ ಒಂದ್ಸಾರಿ ಅಂಬೋಲಿಗೆ..

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು