ಮಕ್ಕಳಿಗಾಗಿ ಸಮೂಹ ದೇಶಭಕ್ತಿಗೀತೆ ಸ್ಪರ್ಧೆ: ರೋಲಿಂಗ್ ಚೈಲ್ಡ್ ಪ್ರೆಸಿಯಸ್ ಬ್ಲಾಸಮ್ ಶಾಲೆ ಪ್ರಥಮ ಸ್ಥಾನ

ಒಟ್ಟು ವೀಕ್ಷಣೆಗಳು : 156
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಲಯನ್ಸ್ ಕ್ಲಬ್ ಆಫ್ ಬೆಳಗಾವಿ ಇವರಿಂದ ನಗರದ ಬಿ.ಕೆ.ಮಾಡೆಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸಮೂಹ ದೇಶಭಕ್ತಿಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಭಾಕರ ಶಹಪುರಕರ ಚಾಲನೆ ನೀಡಿದರು. ಸ್ಪರ್ಧೆಯ ನಿರ್ಣಾಯಕರಾಗಿ ಅಡ್ವೊಕೇಟ್ ರವೀಂದ್ರ ಮನೆ, ಶ್ರೀಧರ್ ಕುಲಕರ್ಣಿ ಆಗಮಿಸಿದ್ದರು. ಬಹುಮಾನಗಳ ಪ್ರಾಯೋಜಕತ್ವವನ್ನು ಶ್ರೀಧರ ಉಪ್ಪಿನ ವಹಿಸಿಕೊಂಡಿದ್ದರು. ಅಧ್ಯಕ್ಷೆ ಶ್ರೀಮತಿ ಭಾರತಿ ವರವಿ  ಸ್ವಾಗತಿಸಿದರು. ಉದಯ ವಡವಿ ವಂದಿಸಿದರು. ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವನ್ನು  ರೂ. 2000/- ನಗದು ಸೇರಿ ಟ್ರೋಫಿಯನ್ನು ರೋಲಿಂಗ್ ಚೈಲ್ಡ್ ಪ್ರೆಸಿಯಸ್ ಬ್ಲಾಸಮ್ ಶಾಲೆ ಪಡೆಯಿತು, ಎರಡನೆಯ ಬಹುಮಾನವನ್ನು ರೂ.1500/- ನಗದು ಸೇರಿ ಟ್ರೋಪಿಯನ್ನು ಬೆನನ್ ಸ್ಮಿತ್ ಶಾಲೆ ಪಡೆದುಕೊಂಡಿತು, ಮೂರನೇ ಬಹುಮಾನವನ್ನು ರೂ. 1000/- ನಗದು ಸೇರಿ ಟ್ರೋಫಿಯನ್ನು ಎಮ್.ವಿ. ಹೇರವಾಡ್ಕರ್ ಶಾಲೆ ಪಡೆದುಕೊಂಡಿತು ಹಾಗೂ ಉತ್ತೇಜಿತ ಬಹುಮಾನವನ್ನು ರೂ.500/- ನಗದನ್ನು ಜ್ಞಾನ ಪ್ರಮೋದ ಮಂದಿರ ಶಾಲೆ ಪಡೆದುಕೊಂಡಿತು. ಈ ಸ್ಪರ್ಧೆಯಲ್ಲಿ ಸುಮಾರು ಹದಿನೇಳು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಶಿವನಗಿ, ರಾಜಶೇಖರ್ ಹಿರೇಮಠ ಹೇಮಂತ್ ಕಿತ್ತೂರ್, ಸೋಮಶೇಖರ್ ಚೋನ್ನದ, ಸೋಮನಾಥ್ ಕೋಲಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು