ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ಧಾಗಿ ಭೇಟಿ ನೀಡುತ್ತೇನೆ, ಕೊರತೆ ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ; ಸಿಎಂ ಯಡಿಯೂರಪ್ಪ

ಒಟ್ಟು ವೀಕ್ಷಣೆಗಳು : 154
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ನಾರಾಯಣಪುರ ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹೊರ ಹೊರಬಿಡಲಾಗುತ್ತಿದೆ ಗೊತ್ತಿಲ್ಲ ನಾನು ಕೂಡ ಇಷ್ಟು ದೊಡ್ಡ ಮಟ್ಟದ ನೀರನ್ನ ನೋಡಿಲ್ಲ ಎಂದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಳಗಾವಿ: ಕಳೆದ ಮೂವತ್ತು ನಲವತ್ತು ವರ್ಷದಲ್ಲಿ ಕಾಣದ‌ ಪ್ರವಾಹ ಈಗ ಬಂದಿದೆ ಜನರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತಿದೆ. 20,680 ಜನರನ್ನು ಸ್ಥಳಂತರಿಸಲಾಗಿದೆ. 106 ಗ್ರಾಮಗಳು ಜಲಾವೃತ ಆಗಿವೆ. ಒಟ್ಟು ಆರು ಜನರು ಸಾವನಪ್ಪಿದ್ದಾರೆ. ಜನರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ಯಾಚರಣೆ ಸಂಬಂಧ ನಾಲ್ಕು  NDR ಮತ್ತು ನಾಲ್ಕು ಸೇನಾ ತಂಡಗಳು ಅಗಮಿಸಲಿದ್ದು ನೀರು ಬಿಡುವ ಕುರಿತು ಮಹಾರಾಷ್ಟ್ರ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದು ಬುಧವಾರ ನಗರದ ಪ್ರವಾಸಿ‌ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ರಕ್ಷಣೆ ಮತ್ತು‌ ಪರಿಹಾರ ಕೊಡಲು ಮುಂದೆ ಬರುವ ಸಂಘ ಸಂಸ್ಥೆಗಳನ್ನ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ದೃತಿಗೆಡುವ ಅಗತ್ಯವಿಲ್ಲ ಎಂಬ ಭರವಸೆಯನ್ನು ಸಿಎಂ ಜನರಿಗೆ ನೀಡಿದ್ದಾರೆ. ಗುರುವಾರ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುತಿದ್ದೇನೆ. ಚಿಕ್ಕೋಡಿ, ಹುಕ್ಕೇರಿ, ಗೋಕಾಕ್, ಅಥಣಿ, ರಾಯಭಾಗದಲ್ಲಿ ಹೆಚ್ಚು ಜನರನ್ನು ಶಿಪ್ಟ್ ಮಾಡಲಾಗಿದೆ. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ನೀರು ಕೃಷ್ಣಾ ನದಿಯನ್ನು ಸೇರುತಿದ್ದು ನಾನು ಕೂಡ ಇಷ್ಟು ದೊಡ್ಡ ಮಟ್ಟದ ನೀರನ್ನ ನೋಡಿಲ್ಲ ನಾರಾಯಣಪುರ ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹೊರ ಹೊರಬಿಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಎಂ ಅದರ ಬಗ್ಗೆ ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ. ಬೆಳಗಾವಿ ತಾಲೂಕಿನ ಸುತಗಟ್ಟಿ, ಸಂಕೇಶ್ವರ ಪಟ್ಟಣದ ಪರಿಹಾರ ಕೇಂದ್ರ, ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮ, ಚಿಕ್ಕೋಡಿ ತಾಲೂಕಿನ ಯಡುರುವಾಡಿ, ಚಿಕ್ಕೋಡಿ ಪಟ್ಟಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತೇನೆ‌. ನಾಳೆ ನಾಡಿದ್ದು ನಾನು ಬೆಳಗಾವಿಯಲ್ಲಿ ಇರುತ್ತೇನೆ. ಅವಶ್ಯಕತೆ ಇದ್ದರೆ 10ನೇ ತಾರೀಖು ಸಹ ಬೆಳಗಾವಿಯಲ್ಲಿಯೆ ಇರುತ್ತೇನೆ. ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು‌ ಮಾಡುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರಕ್ಕೆ ಈಗಾಗಲೇ ಅಗತ್ಯ ಇರುವ ಅನುದಾನ ಕೊಡುವಂತೆ ಮನವಿ ಮಾಡಿದ್ದೇನೆ. ಪರಿಹಾರ ಕೇಂದ್ರಗಳಿಗೆ ನಾನೇ ಖುದ್ದು ಭೇಟಿ ನೀಡುತ್ತೇನೆ. ಅಲ್ಲಿ ಏನಾದರೂ ಕೊರತೆ ಕಂಡು ಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿಗಳು ಪಿಎಸ್ ಐ ಈರಣ್ಣಾ ಲಟ್ಟೆ ಮೃತಪಟ್ಟಿರುವ ಬಗ್ಗೆ ಮಾತನಾಡಿ  50 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ಕುಟುಂಬದವರಿಗೆ ಸರಕಾರಿ ನೌಕರಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇ‌ನೆ ಎಂದು ಹೇಳಿದ್ದಾರೆ. ದಂಪತಿಗಳು ಬಳ್ಳಾರಿ ನಾಲಾದಲ್ಲಿ ಸಿಕ್ಕಿಹಾಕಿಕೊಂಡ ವಿಚಾರ ಸಂಬಂಧ ಪಟ್ಟಂತೆ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ದಂಪತಿಗಳನ್ನ ಎನಾದ್ರೂ ಮಾಡಿ ರಕ್ಷಣೆ ಮಾಡಬೇಕಿದೆ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿಎಂ ಜಿಲ್ಲಾಧಿಕಾರಿಗಳಿಗೆ ಇಲ್ಲಿ ಕೇಳ್ರಿ ಎಂದು ಗದರಿದ ಘಟನೆಯು ನಡೆಯಿತು. ಇನ್ನು ಕಳಸ ಬಂಡೂರಿ‌ ಮಹದಾಯಿ ಯೋಜನೆ ಕುರಿತು ಮಾತನಾಡಿ ಪಿಎಂ ಹಾಗೂ ಕೇಂದ್ರ ನೀರಾವರಿ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಯೋಜನೆಯನ್ನ ಬೇಗ ಅನುಷ್ಠಾನ ಮಾಡುವಂತೆ ವಿನಂತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಂಪುಟ ರಚನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸಿಎಂ ಆದಷ್ಟು ಬೆಗ ಸಂಪುಟ ವಿಸ್ತರಣೆಯನ್ನು ಮಾಡಲಾಗುವುದು ಇಲ್ಲಿ ಬರುವ ಮುನ್ನ ಇದರ ಬಗ್ಗೆ ಗೃಹ ಸಚಿವ ಅಮಿತ್ ಶಾ ಜತೆಗೆ ಚರ್ಚಿಸಿ ಇಲ್ಲಿಗೆ ಬಂದಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಉಮೇಶ ಕತ್ತಿ, ಅನಿಲ ಬೆನಕೆ, ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ ಮುಖಂಡರಾದ ಶಶಿಕಾಂತ ನಾಯಕ, ವಿ.ಆಯ್.ಪಾಟೀಲ್, ರಾಜೀವ್ ಟೋಪ್ಪನ್ನವರ ಸೇರಿದಂತೆ  ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು