ಭೀಕರ ಪ್ರವಾಹ ಹಿನ್ನಲೆ: ಸರ್ನೋಬತ ಆಸ್ಪತ್ರೆಯಲ್ಲಿ ಡೆಂಗ್ಯೂ ಮತ್ತು ಚಿಕನಗುನ್ಯಾಕ್ಕೆ ಉಚಿತ ಔಷಧಿ: ಡಾ. ಸೋನಾಲಿ

ಒಟ್ಟು ವೀಕ್ಷಣೆಗಳು : 182
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಭಾರಿ ಮಳೆಯಿಂದಾಗಿ ಸದ್ಯ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭೀಕರ  ಪ್ರವಾಹಕ್ಕೆ ತುತ್ತಾಗಿದೆ. ಕ್ರಮೇಣವಾಗಿ ಪ್ರವಾಹ ಕಡಿಮೆಯಾದಂತೆಲ್ಲ ಟೈಪಾಯಿಡ, ಕಾಲರಾ, ಲೆಪ್ಟೊಸ್ಪಿರೋಸಿಸರಂತ ರೋಗಗಳು ಬರುವ ಸಂಭವವಿದೆ ಮುಖ್ಯವಾಗಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ ಮತ್ತು ಚಿಕನಗುನ್ಯಾ ರೋಗಗಳು ಬರುವ ಸಾಧ್ಯತೆಗಳು ಜಾಸ್ತಿ ಇವೆ ಆದ್ದರಿಂದ ಈ ರೋಗಗಳ ತಡೆಗಟ್ಟುವಿಕೆಗಾಗಿ ಜಾಗೃತವಹಿಸುವಿದು ಅಗತ್ಯವಾಗಿದೆ. ಶುದ್ಧ ಕುಡಿಯುವ ನೀರು (ಕಾಯಿಸಿ ಆರಿಸಿದ ನೀರು), ಸೊಳ್ಳೆಗಳನ್ನು ತಡೆಗಟ್ಟಲು ಸೊಳ್ಳೆ ಪರದೆ ವ್ಯವಸ್ಥೆ, ವಾಸಿಸುತ್ತಿರುವ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶುಚಿಯನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಡೆಂಗ್ಯೂ ಹಾಗೂ ಚಿಕನಗುನ್ಯಾ ರೋಗಗಳಿಗೆ ಉಚಿತ ಔಷಧ ಕೊಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಡಾ.ಸರ್ನೋಬತ ಆಸ್ಪತ್ರೆ, ಅಮರ್ ಎಂಪೈರ್, ಗೋವವೇಸ್ ವೃತ್ತದ ಹತ್ತಿರ ಬೆಳಗಾವಿಗೆ ಭೇಟಿ ನೀಡಬಹುದು. 9916106896 ಗೆ ಸಂಪರ್ಕಿಸಿ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು