ಪ್ರವಾಹ ಹಿನ್ನೆಲೆ: ಸಂತ್ರಸ್ತರ ನೆರವಿಗೆ ಧಾವಿಸಿದ ಆರ್ ಎಸ್ ಎಸ್

ಒಟ್ಟು ವೀಕ್ಷಣೆಗಳು : 343
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಹುಕ್ಕೇರಿ: ಉತ್ತರ ಕರ್ನಾಟಕದ ನಾನಾ ಕಡೆ ಪ್ರವಾಹವುಂಟಾಗಿದ್ದ ಕಾರಣ ತಾಲೂಕಿನ ಅವರಗೋಳ, ನೋಗನಿಹಾಳ, ಗುಡಸ, ಹುಲ್ಲೊಳಿಹಟ್ಟಿ, ಬೆನಿವಾಡ್, ಮದಮಕ್ಕನಾಳ ಸೇರಿದಂತೆ ಹಲವೆಡೆ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರಿಗೆ ಆರ್.ಎಸ್.ಎಸ್ ಸಂಘಟನೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ನಿರಾಶ್ರಿತರ ದುಃಖ ಆಲಿಸಿ ಅವರಿಗೆ ಬೆಡ್ ಶೀಟ್, ಸಿರೆ, ಟವೆಲ, ಲುಂಗಿ ಸೇರಿದಂತೆ ತಿಂಡಿ ತಿನಿಸುಗಳನ್ನು ವಿತರಿಸುವುದರ ಜೋತೆಗೆ ಡಾ.ರಾಜೇಶ್ ನೇರ್ಲಿ ಅವರು ಸಂತ್ರಸ್ತರ ವೈದ್ಯಕೀಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ನೇರ್ಲಿ ಈ ಪ್ರವಾಹದಲ್ಲಿ ಹಲವಾರು ಜನರ ಆಸ್ತಿ ಪಾಸ್ತಿಗಳಿಗೆ ಹಾನಿವುಂಟಾಗಿದೆ, ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ ಅಂತವರಿಗೆ ನಮ್ಮ ಆರ್.ಎಸ್.ಎಸ್ ಸಂಘಟನೆಯಿಂದ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಶಿವಕುಮಾರ್ ನಾಯಿಕ, ಸಿದಯ್ಯಾ ಹಿರೇಮಠ, ನಾಗರಾಜ್ ಪಾಟೀಲ್, ಪ್ರವೀಣ ದೇಶಪಾಂಡೆ, ಶಿವಲಿಂಗಯ್ಯ ಮಠಪತಿ, ಬಸವರಾಜ ರಾಮಗೊಂಡಿ, ವಿನಯ ಮಠಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು