ಕಲೆಯಲ್ಲಿ ಅರಳಿದ ನೆರೆ: ಬೆರಗು ಮೂಡಿಸುತಿದೆ ಈ ರವಿವರ್ಮಾನ ಚಿತ್ತಾರ

ಒಟ್ಟು ವೀಕ್ಷಣೆಗಳು : 747
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ವಿನಯ ಮಠಪತಿ, ಹುಕ್ಕೇರಿ

ಪ್ರತಿಭೆಯ ಸಾಕ್ಷಾತ್ಕಾರಕ್ಕೆ ಎಳೆತನ, ಹಿರಿಯರು ಎಂಬ ಅಂತರವಿಲ್ಲ. ಪ್ರತಿಭೆ ದೈವದತ್ತ ಕೊಡುಗೆ. ಅದಕ್ಕೆ ಸಾಣೆ ಹಿಡಿದಾಗ ಹರಿತಗೊಂಡು ಮಿಂಚುವುದು ಅದಕ್ಕೆ ಉತ್ತಮ ಉದಾಹರಣೆ  ಎಂದರೆ ಬೆಳಗಾವಿ ಜಿಲ್ಲೆಯ ಈ ಯುವ ಕಲಾವಿದ.

ಅಷ್ಟಕ್ಕೂ ಈ ಯುವ ಕಲಾವಿದ ಮಾಡಿದ್ದೇನು ? ಬೆಳಗಾವಿ ಸೇರಿದಂತೆ ಇಡಿ ಉತ್ತರ ಕರ್ನಾಟಕ ಭೀಕರ ಮಳೆಗೆ ತತ್ತರಿಸಿದೆ, ಊಟ ವಸತಿ ಇಲ್ಲದೆ ಜನರು ಪರದಾಡುವಂತಾಗಿದೆ. ಕಣ್ಣೀರಿನ ಮದ್ಯೆ ಮುಂದಿನ ನಮ್ಮ ಪರಸ್ಥಿತಿ ಏನು ಎಂಬುದು ಜನರಿಗೆ ತಿಳಿಯದಾಗಿದೆ ಇಂತಹ ಸಂದರ್ಭದಲ್ಲಿ ಪ್ರವಾಹವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವರ್ಣಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಲಾವಿದ ತನ್ನ ಕೈಚಳಕದಿಂದ ಬೆಳಗಾವಿ ಪ್ರವಾಹದ ಬಗ್ಗೆ ಬಿಡಿಸಿದ ಚಿತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ. ಜನರು ಆ ಚಿತ್ರವನ್ನು ತಮ್ಮ ಡಿಪಿ, ಸ್ಟೇಟಸ್ ಇಟ್ಟು ಕೊಳ್ಳುತ್ತಿದ್ದಾರೆ.

ಆ ಯುವ ಕಲಾವಿದನ ಚಿತ್ರ ಯಾವುದು ? ಜನರು ಕಣ್ಣೀರಿಡುವ ದೃಶ್ಯ ಇದಾಗಿದ್ದು. ಈ ಚಿತ್ರ ಎಲ್ಲರ ಮನಮುಟ್ಟುವಂತೆ ಇದೆ. ಬೆಳಗಾವಿ ಜಿಲ್ಲೆಯ ವಿವಿಧ ತಾಲುಕುಗಳಲ್ಲಿ ನೆರೆ ಪ್ರವಾಹದಿಂದ ಭೀಕರ ಪ್ರವಾಹಕ್ಕೆ ತುತ್ತಾಗಿ ಜನರು ಮಳೆಯಿಂದ ಕಣ್ಣೀರು ಇಡುವ ಚಿತ್ರ ಇದಾಗಿದೆ.

ಯಾರಿತ ಈ ಯುವ ಕಲಾವಿದ ? ರವಿವರ್ಮಾ ಹತ್ತರಕಿ ಎಂಬುವನಾದ ಈತ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಪುರ ಹತ್ತಿರದ ಕುಂದರಗಿ ಗ್ರಾಮದವ ಇಂಜನೀಯರಿಂಗ್ ಪದವಿದರನಾಗಿದ್ದು ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾನು ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರಗಳನ್ನು ಬಿಡಿಸುತ್ತಿದ್ದೇನೆ. ಸದ್ಯ ಇದು ನನಗೆ ಹವ್ಯಾಸವಾಗಿದೆ. ನನಗೆ ಮಾರ್ಗದರ್ಶಕರು ಅಂತಾ ಯಾರು ಇಲ್ಲಾ. ಕೆಲ ಸ್ನೇಹಿತರು ನನನ್ನು ಪ್ರೋತ್ಸಾಹಿಸಿದರು ನಾನು ಸ್ವತಃ ಕಲಿತಿದ್ದೇನೆ. ರವಿವರ್ಮಾ ಹತ್ತರಕಿ

ರವಿವರ್ಮಾ ನನ್ನ ಕಾಲೇಜಿನ ಸ್ನೇಹಿತ. ಕಳೆದ ಕೆಲ ವರ್ಷಗಳಿಂದ ಚಿತ್ರ ಬಿಡಿಸುತ್ತಿದ್ದಾನೆ. ಯಾವುದಾದರೂ ಒಂದು ಫೋಟೋ ತೋರಿಸಿದರೆ ಸಾಕು ಆ ಫೋಟೋದಂತೆ ಆ ಚಿತ್ರ ಅವನ ಕೈಯಲ್ಲಿ ಮೂಡಿ ಬರುತ್ತದೆ. ಈತ ತನ್ನ ಹವ್ಯಾಸಕ್ಕಾಗಿ ಚಿತ್ರ ಬಿಡಿಸಿದರೂ. ನನಗೆ ಸೇರಿದಂತೆ ನಮ್ಮ ಸ್ನೇಹಿತರಿಗೆ ಈತನಿಂದ ಫೋಟೋ ಸ್ಕೆಚ್ ಹಾಕಿಸಿ ಇತರರಿಗೆ ಬರ್ತಡೇ ಗಿಫ್ಟ್ ಗಳನ್ನು ನೀಡಿದ್ದೇವೆ. ಕ್ಷಯ ಕಣಲಗಿ, ಸ್ನೇಹಿತ

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು