ಪ್ರವಾಹದಿಂದ ಪರಿತಪಿಸುತ್ತಿರುವ ಜನರಿಗೆ ಈಗ ವಿಷಜಂತುಗಳ ಕಾಟ..!

ಒಟ್ಟು ವೀಕ್ಷಣೆಗಳು : 118
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಚಿಕ್ಕೋಡಿ: ಮಹಾಮಳೆ ಮತ್ತು ಜಲಪ್ರಳಯದಿಂದ ಚೇತರಿಸಿಕೊಳ್ಳುತ್ತಿರುವ ಜನರ ಮುಂದೆ ಈಗ ಅನೇಕ ಸವಾಲುಗಳು ಎದುರಾಗಿವೆ. ಮಳೆ ಕಡಿಮೆಯಾಗಿ, ಪ್ರವಾಹದ ನೀರು ಇಳಿಮುಖವಾದ ನಂತರ ಗಂಜಿ ಕೇಂದ್ರಗಳಿಂದ ತಮ್ಮ ಮನೆಗಳತ್ತ ತೆರಳಿದ ಸಂತ್ರಸ್ತರಿಗೆ ವಿಷ ಸರ್ಪಗಳು, ಮೊಸಳೆಗಳು ಸ್ವಾಗತ ಕೋರುತ್ತಿವೆ. ರಾಯಬಾಗ ಪಟ್ಟಣದ ರಾಮಚಂದ್ರ ಹೆಗಡೆಯವರ ತೋಟದ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು. ಅರಣ್ಯ ಇಲಾಖೆಯವರು ಸತತ 4 ತಾಸು ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಹಿಡಿದು ಹಿಡಕಲ್ ಜಲಾಶಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಬೇಸತ್ತ ನದಿ ತೀರದ ಸಂತ್ರಸ್ಥರು. ಮಹಾಪೂರದಿಂದಾಗಿ ಮನೆ ಮಠ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಬೆಸತ್ತ ಸಂತ್ರಸ್ತರಿಗೆ ನೆರೆ ಇಳಿದ ಬಳಿಕ ಸ್ವಗ್ರಾಮಗಳತ್ತ ತೆರಳಿ, ಪುನಃ ಬದುಕು ಕಟ್ಟಿಕೊಳ್ಳುವ ಸಾಹಸ ಮಾಡುತ್ತಿರುವುದು ಒಂದೆಡೆಯಾದರೆ, ಮನೆಯೊಳಗೆ ಹಾಗೂ ಜನವಸತಿ ಪ್ರದೇಶಗಳಿಗೆ ನುಸುಳುತ್ತಿರುವ ವಿಷ ಜಂತುಗಳ ಭಯ ಇನ್ನೊಂದು ಕಡೆ ಇದೆ. ಇತ್ತ ಜಿಲ್ಲಾಡಳಿತ ಸಂತ್ರಸ್ತರ ಪರಸ್ಥಿತಿಯನ್ನು ಅವಲೋಕಿಸಿ ಅವರ ರಕ್ಷಣೆಗೆ ಧಾವಿಸಬೇಕಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು