ಡಿಕೆಶಿ ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡು ನುಸುಳಿಕೊಂಡು ಬಂದಿದ್ರು: ಎಸ್.ಆರ್.ಹಿರೇಮಠ

ಒಟ್ಟು ವೀಕ್ಷಣೆಗಳು : 86
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಧಾರವಾಡ: ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಅರೆಸ್ಟ್ ಆದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತಿಕ್ರಯಿಸಿರುವ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಡಿ. ಕೆ.  ಶಿವಕುಮಾರ ಎಷ್ಟೋ ವರ್ಷಗಳ ಹಿಂದೆಯೇ ಅರೆಸ್ಟ ಆಗಬೇಕಿತ್ತು ಆದರೆ ಕೊನೆಗೂ ಈಗ ಆಗಿದೆ. ಅವರ ಹಗರಣಗಳು ಕೇವಲ ಒಂದೆರಡಲ್ಲ ಬಹಳಷ್ಟು ಇವೆ.  2003 ರಲ್ಲಿ ಸಚಿವರಾಗಿದ್ದಾಗ ಬೆಂಗಳೂರಿನ ಬೆನ್ನಿಗಾನ ಹಳ್ಳಿಯಲ್ಲಿ 4 ಎಕರೆ 20 ಗುಂಟೆ ಜಮೀನು ಖರೀದಿಸಿದ್ರು ಆದರೆ ಕಾನೂನಿನ ಪ್ರಕಾರ ಆ ಜಮೀನನ್ನು ತೆಗೆದುಕೊಳ್ಳುಲು ಅವಕಾಶ ಇಲ್ಲ ಆದರು ಡಿ.ಕೆ. ಶಿವಕುಮಾರ ಹೇಗೆ ಖರೀದಿ ಮಾಡಿದರು ? ಎಂದು ಪ್ರಶ್ನಿಸಿ ಇವರ ವಿರುದ್ಧ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಸುಮಾರು 3 ಲಕ್ಷ ಕೋಟಿ ರೂ. ಹಗರಣ ಇದೆ ಇದರ ಓರಿನೇಟರ್ ಡಿಕೆಶಿ ಆಗಿದ್ದಾರೆ. ಮಧ್ಯಮ ವರ್ಗ ಹಾಗೂ ನೌಕರರಿಗೆ ಕೋಡುವ ಭೂಮಿಯನ್ನ  ರಿಯಲ್ ಎಸ್ಟೇಟ್ ನವರಿಗೆ ಕೊಟ್ಟಿದ್ದಾರೆ. ಬಳ್ಳಾರಿಯಲ್ಲಿ ಗ್ರಾನೈಟ್ ಹಗರಣ  10.08 ಲಕ್ಷ  ಮೆಟ್ರಿಕ್ ಟನ್ ಅದಿರು ಲೂಟಿ ಮಾಡಿದ್ದಾರೆ. ಎಂದು ಆರೋಪಿಸಿ ಇಂತವರು ನಾಗರೀಕ ಸಮಾಜದಲ್ಲಿ ಇರಬಾರದು ಇವರನ್ನು ಲೋಕಾಯುಕ್ತ, ಸಿಬಿಐ ಮೂಲಕ ಮೊದಲೇ ಜೈಲಿಗೆ ಕಳಿಹಿಸಬೇಕಾಗಿತ್ತು ಎಂದು ಹಿರೇಮಠ ಹೇಳಿದರು. ಕಾಂಗ್ರೆಸ್ ಪಕ್ಷದ ಹೆಸರು ದುರ್ಬಳಕೆ ಮಾಡಿಕೊಂಡು ಬಂದವರು ಇವರು. ನನ್ನ ಬಳಿ ಎಲ್ಲ ದಾಖಲೆಗಳು ಇವೆ.  ಈ ಎಲ್ಲ ದಾಖಲೆಗಳನ್ನು ಕ್ರೋಡೀಕರಿಸಿ ಕೊಂಡಿರುವ ವಿಚಾರ ಜನರಿಗೆ ತಿಳಿಸಿದ್ದೇವೆ. ನಮ್ಮದು ಸ್ವಲ್ಪ ನಿಧಾನವಾಗಿತ್ತು ಅಷ್ಟೇ ಎಂದು ಹೇಳಿ ಇಂತವರನ್ನು ಬಂದಿಸಿದರೆ ಮಾತ್ರ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು