ಪಬ್ ಜಿ ತಂದ ಆಪತ್ತು; ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ

ಒಟ್ಟು ವೀಕ್ಷಣೆಗಳು : 134
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ ರಾಜ್ಯವೆ ಬೆಚ್ಚಿಬೀಳಿಸುವಂತ ಭೀಕರ ಪ್ರಕರಣ ನಡೆದಿದೆ.  ಮೊಬೈಲ್ ಸಂಬಂಧ ಬುದ್ದಿ ಹೇಳಿದ್ದಕ್ಕೆ ತಂದೆಯನ್ನೆ ಮಗ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಕಾಕತಿ ಗ್ರಾಮದಲ್ಲಿ ಪಬ್ ಜಿ ಹುಚ್ಚಿನಿಂದ ಯುವಕನೊರ್ವ ತನ್ನ ಹೆತ್ತ ತಂದೆಯನ್ನೇ ಕೊಲೆ ಮಾಡಿದ್ದಾನೆ. ರವಿವಾರ ಅಷ್ಟೇ ಬುದ್ಧಿ ಹೇಳಿದ್ದೇ ತಂದೆಯ ಸಾವಿಗೆ ಕಾರಣವಾಗಿದೆ. ಶಂಕ್ರಪ್ಪ ಕಮ್ಮಾರ (59) ಹತ್ಯೆಗೀಡಾಗಿರುವ ತಂದೆ. ರಘುವೀರ್ ಕಮ್ಮಾರ (21) ತಂದೆಯನ್ನು ಕತ್ತರಿಸಿರುವ ಪಾಪಿ ಮಗ. ಶಂಕ್ರಪ್ಪ ಪೊಲೀಸ್ ಇಲಾಖೆಯಿಂದ ಮೂರು ತಿಂಗಳ ಹಿಂದಷ್ಟೇ ನಿವೃತ್ತರಾಗಿದ್ದ ಮಗ ತಡ ರಾತ್ರಿಯೂ ಪಬ್ ಜಿ ಗೇಮ್ ಅಡುತ್ತಿದ್ದದ್ದನು ಗಮನಿಸಿದ ಶಂಕ್ರಪ್ಪ ಮಗನಿಗೆ ರಾತ್ರಿ ಬೈದು ಬುದ್ದಿ ಹೇಳಿದ್ದಾನೆ. ಅದನ್ನು ಹೇಳಿದಷ್ಟೇ ರಾತ್ರಿ ತಂದೆ ಮಲಗಿದ್ದಾಗ ತಾಯಿಯನ್ನು ಒಂದು ರೂಮಿನಲ್ಲಿ ಲಾಕ್ ಮಾಡಿ ತಂದೆಯನ್ನು ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಕತ್ತು, ಕಾಲು ಕತ್ತರಿಸಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆಯೆ ಕಾಕತಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು