ಕುಂದಾನಗರಿ ಮಾರುಕಟ್ಟೆಗೆ ಬಂತು ನ್ಯೂ ರೇನಾಲ್ಟ್ ಟ್ರೈಬರ್

ಒಟ್ಟು ವೀಕ್ಷಣೆಗಳು : 38
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ರೆನಾಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟ್ರೈಬರ್ ಕಾರನ್ನು ಗ್ರಾಹಕರ ನೀರಿಕ್ಷೆಯಂತೆ ಬಿಡುಗಡೆ ಮಾಡಿದೆ. ಪ್ರತಿಸ್ಪರ್ಧಿ ಕಾರಗಳಿಂತಲೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮಾದರಿಯಾಗಿ ಬೆಳಗಾವಿ ಮಾರುಕಟ್ಟೆಗೆ ಟ್ರೈಬರ್ ಪ್ರವೇಶಿಸಿದೆ. ಶನಿವಾರ ದಿ.7 ರಂದು  ಉದ್ಯಮಭಾಗದಲ್ಲಿರುವ ನಾಗಶಾಂತಿ ರೆನಾಲ್ಟ್ ಶೋರೂಂನಲ್ಲಿ ಗ್ರಾಹಕರ ಸಮ್ಮುಖದಲ್ಲಿ ಲೋಕಾರ್ಪಣಾ ಸಮಾರಂಭ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವಕೀಲ ಬಸವರಾಜ ಸುಲ್ತಾನಪುರೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರ ಪುತ್ರ ಸುಲ್ತಾನಪುರೆ ರೆನಾಲ್ಟ್ ಸಂಸ್ಥೆಯು ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದು ಕ್ವಿಡ್, ಡಸ್ಟರ್ ಕಾರಗಳಂತೆ ಟ್ರೈಬರ್ ಕೂಡ ಮಾರುಕಟ್ಟೆಯಲ್ಲಿ ಹೆಸರು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾರಾಟ ಸಲಹೆಗಾರ ತಾನಾಜಿ ಮಾತನಾಡಿ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳಿಗೆ ವಿಶೇಷ ಬೇಡಿಕೆಯಿದೆ, ಕುಟುಂಬ ಸಮೇತರಾಗಿ ಪ್ರಯಾಣಿಸುವುದಕ್ಕಾಗಿಯೇ ಎಂಪಿವಿ ಕಾರುಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಗ್ರಾಹಕರನ್ನು  ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿದ ಟ್ರೈಬರ್ ಕಾರನ್ನು ರೆನಾಲ್ಟ್ ಸಂಸ್ಥೆಯು ಬಿಡುಗಡೆಗೊಳಿಸಿದೆ. ಇದು ಹಲವಾರು ನವ ವೈಶಿಷ್ಟ್ಯಗಳನ್ನು ಹೊಂದಿದೆ. ಕಡಿಮೆ ಬೆಲೆಗೆ ಈ 7 ಆಸನಗಳನ್ನು ಹೊಂದಿದ ಕಾರು  ಎಂಬ ಹೆಗ್ಗಳಿಕೆಗೆ  ಟ್ರೈಬರ್ ಪಾತ್ರವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಕಿರಣ ಅಗಡಿ, ಸೇಲ್ಸ್ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು