ಹಾಡುಹಗಲೇ ಹಸು ಹೊತ್ತೊಯ್ದ ಹುಲಿ

ಒಟ್ಟು ವೀಕ್ಷಣೆಗಳು : 156
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಹಾಡುಹಗಲೇ ಜನವಸತಿ ಪ್ರದೇಶದಲ್ಲಿ ಪ್ರವೇಶಿಸಿ ಹುಲಿಯೊಂದು ದನದ ಕೊಟ್ಟಿಯಲ್ಲಿ ಕಟ್ಟಿದ್ದ ಹಸುವನ್ನು ಹೊತ್ತೊಯ್ದ ಘಟನೆ ಖಾನಾಪುರ ತಾಲೂಕಿನ ಹೆಮ್ಮಡಗಾ ಗ್ರಾಮದಲ್ಲಿಂದು ನಡೆದಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಭೀಮಗಡ ಅಭಿಯಾರಣ್ಯದಿಂದ ಬಂದ ಹುಲಿ ಹೆಮ್ಮಡಗಾ ಗ್ರಾಮದ ರೈತ ಮಾದಾರ ಎಂಬುವರಿಗೆ ಸೇರಿದ ಹಸುವನ್ನೇ ಹೊತ್ತೊಯ್ದಿದೆ. ಪದೇ ಪದೆ ಹುಲಿ ಉಪಟಳ ಹೆಚ್ಚಳವಾಗಿದ್ದು, ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ಬಾರದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು